ಇಂಡಿಯಲ್ಲಿ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ ಎಚ್ಚರಿಕೆ..!
ಇಂಡಿ: ಕಾಂಗ್ರೆಸ್ ಸರ್ಕಾರದ ದುರಾಡಳಿತ ಜನವಿರೋಧಿ ಧೋರಣೆ ನೀತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಶಿಲವಂತ ಉಮರಾಣಿ ನೀಡಿದರು.
ಶನಿವಾರ ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನ ಚುಂಬಿಗೆ ತಲುಪಿದ್ದರಿಂದ ಬಡವರು, ಕೂಲಿ ಕಾರ್ಮಿಕರು, ಸಾಮನ್ಯರ ಜೀವನ ನಡೆಸುವುದು ಅತ್ಯಂತ ಗಂಭೀರ ಮತ್ತು ಸಂಕಷ್ಟದ ಪರಿಸ್ಥಿತಿ ಎದುರುಸುತ್ತೀದ್ದಾರೆ. ಹಾಲು, ಪೆಟ್ರೋಲ್, ಡಿಜೈಲ್, ವಿದ್ಯುತ್, ಸ್ಟಾಂಪು, ಬಡ ರೋಗಿಗಳ ಚಿಕಿತ್ಸೆಗೆ ₹5 ಇದಿದ್ದು ₹10 ಗೆ ಹೆಚ್ಚಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರೆಂಟಿ ಗ್ಯಾರೆಂಟಿ ಎಂದು ಹೇಳಿ ಅಲ್ಪ ಸಂಖ್ಯೆಯನ್ನು ಒಲೈಸಲು ಹೋಗಿ ಇಡೀ ವ್ಯವಸ್ಥೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಮಾತನಾಡಿದರು.
ಇನ್ನೂ ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಹಾಗೂ ಸ್ವ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ ಕಿಡಿಕಾರಿದರು. ಯಾವುದೇ ಕಾರಣಕ್ಕೂ ಕಾರ್ಯಕರ್ತರು ವಿಚಲಿತರಾಗಬಾರದು. ರಾಜ್ಯಮಟ್ಟದ ಭಿನ್ನಾಭಿಪ್ರಾಯಗಳನ್ನು ತಾಲ್ಲೂಕು ಮಟ್ಟದಲ್ಲಿ ತಂದು ಹಾಕಿ ಸ್ಥಳೀಯ ಶಾಸಕರನ್ನು ಮತ್ತಷ್ಟು ಪ್ರಬಲಗೊಳಿಸುವ ಕಾರ್ಯಕ್ರಮಗಳನ್ನು ಬಿಜೆಪಿ ಮುಖಂಡರು ಮಾಡಬಾರದು. ಬರುವ ದಿನಮಾನಗಳಲ್ಲಿ ತಾ.ಪಂ ಮತ್ತು ಜಿ.ಪಂ ಚುನಾವಣೆ ಬರುತ್ತಿದ್ದು, ಕಾರ್ಯಕರ್ತರು ಅಧಿಕಾರದಲ್ಲಿ ಬರಬೇಕಾಗಿದೆ. ಭಿನ್ನಾಭಿಪ್ರಾಯಗಳಿಂದ ಕಾರ್ಯಕರ್ತರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇನ್ನೂ ಚುನಾವಣೆಯಲ್ಲಿ ನಿಲ್ಲೊದು, ಬಿಳ್ಳೋದು, ಚುನಾವಣೆ ನಿಲ್ಲುವಾಗ ತಾಯಿ ಪಕ್ಷ ಭಾರತೀಯ ಪಕ್ಷ ಎನ್ನುವುದು. ಸೋತ ನಂತರ 8 ತಿಂಗಳ ಕಳೆದರೂ ಕ್ಷೇತ್ರದ ನೋಡದವರು, ಹಿಂದುತ್ವದ ಸ್ಮರಣೆ ಮಾಡುತ್ತಿದ್ದಾರೆ. ಚುನಾವಣೆಗೆ ನಿಲ್ಲುವಾಗ ಬಿಜೆಪಿ ಪಕ್ಷದ ಟಿಕೆಟ್ ತೆಗೆದುಕೊಂಡು ನಿಂತು ಸೋಲಪ್ಪಿದ್ದಾರೆ. ಆ ನಂತರ ಬಿಜೆಪಿಯಿಂದ ಕಾಸುಗೌಡ ಬಿರಾದಾರ ಸ್ಪರ್ಧೆ ಮಾಡಿದಾಗ, ಮಾಡಿದ್ದೇನು..? ಆಗ ಕಾಸುಗೌಡ ಹಿಂದೂ ಎಂದು ಗೊತ್ತಾಗಲಿಲ್ವಾ..! ಇವತ್ತು ಬಸನಗೌಡ ಯತ್ನಾಳರನ್ನು ಬೆನ್ನು ಹತ್ತಿ ಹಿಂದುತ್ವ ಬೆಂಬಲಿಸಿ ಎಂದು ಹೇಳುತ್ತಿದ್ದರಿ. ನಮ್ಮಲ್ಲಿ ಹುಟ್ಟಿದಾಗಲೇ ಹಿಂದುತ್ವ ರಕ್ತವಿದೆ. ಯಾರ ಬೆನ್ನು ಹತ್ತುವ ಅವಶ್ಯಕತೆ ಇಲ್ಲ ಎಂದು ದಯಾಸಾಗರ ಪಾಟೀಲ ವಿರುದ್ಧ ವಾಕ್ ಸಮರ ನಡೆಸಿದರು. ಬರುವ ದಿನಮಾನಗಳಲ್ಲಿ ಇಂಡಿಯಲ್ಲಿ ಭಾರತೀಯ ಜನತಾ ಪಕ್ಷ ನೂರಕ್ಕೆ ನೂರರಷ್ಟು ಬಲಿಷ್ಠವಾಗುತ್ತದೆ. ಸ್ಥಳೀಯವಾಗಿ ತಾಲ್ಲೂಕು ಪಂಚಾಯತ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೆವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಬಗಲಿ, ರಾಜಕುಮಾರ ಸಗಾಯಿ, ರಾಘವೇಂದ್ರ ಕಾಪಸೆ, ದೇವೆಂದ್ರ ಕುಂಬಾರ, ಸಂಜು ದಶವಂತ, ಶ್ರೀಮಂತ ಮೊಗಲಾಯಿ, ರಾಜಶೇಖರ ಯರಗಲ, ಮಲ್ಲು ವಾಲಿಕಾರ, ಶಾಂತು ಕಂಬಾರ, ಶ್ಯಾಮಲಾ ಬಗಲಿ, ಭೌರಮ್ಮ ನಾವಿ ಸೇರಿದಂತೆ ಅನೇಕರು ಇದ್ದರು.
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಂಡಳ ಅಧಕ್ಷ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ ಮಾತನಾಡಿದರು.




















