ಚವಡಿಹಾಳ ಕಾಲೇಜಿನಲ್ಲಿ ಗಾಂಧಿ ಉಪನ್ಯಾಸ..
ಮನುಕುಲದ ಮಹಾಪುರುಷ ಮಹಾತ್ಮ ಗಾಂಧೀಜಿ.
ಇಂಡಿ : ಗಾಂಧಿಜಿಯವರ ಹಿರಿಮೆ – ಗರಿಮೆಗಳಿಗೆ ನೈತಿಕತೆಯಿಂದ ಕೂಡಿದ ಅವರ ಪವಿತ್ರಮಯ ಜೀವನವೇ ಕಾರಣ. ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅವರ ಪಾತ್ರ ಅದ್ವಿತೀಯವಾದುದು ಎಂದು ವಿಜಯಪುರದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಎಂ.ಬಿ. ರಜಪೂತ್ ಹೇಳಿದರು.
ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪದವಿ ಪೂರ್ವ ಕಾಲೇಜನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟಿçÃಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಸರ್ಕಾರ, ರಾಷ್ಟçಪಿತ ಮಹಾತ್ಮ ಗಾಂಧಿ ಫೌಂಡೇಶನ್ ಬೇನಾಲ್ ಆರ್. ಎಸ್ ಇವರ ಸಹಯೋಗದಲ್ಲಿ ಜರುಗಿದ ರಾಷ್ಟçಪಿತ ಮಹಾತ್ಮ ಗಾಂಧೀಜಿ ಮತ್ತು ಯುವ ಮನಸುಗಳು ‘ವಿಷಯ ಕುರಿತು ರಾಜ್ಯ ಮಟ್ಟದ ವಿಶೇಷ ಉಪನ್ಯಾಸ ಕಾರ್ಯಕ್ರಮ, ರಸಪ್ರಶ್ನೆ ಹಾಗೂ ಸಂವಾದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರದ ಇತಿಹಾಸ ಉಪನ್ಯಾಸಕ ಆರ್. ಸಿ. ಹಿರೇಮಠ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಒಬ್ಬ ವ್ಯಕ್ತಿಯಲ್ಲ ಅವರೊಂದು ಶಕ್ತಿ ತಮ್ಮ ಸದ್ಭಾವನ, ದೂರದೃಷ್ಟಿ, ಮಾನವೀಯತೆಯ ಮಹಾರೂಪವೇ ಮೈದಳೆದ ಆದರ್ಶ ಪುರುಷ ಅಂತಹ ಯುಗ ಪುರುಷನನ್ನು ಮತ್ತೊಮ್ಮೆ ನೋಡಬೇಕಾದರೆ ನಾವು ಸಾವಿರಾರು ವರ್ಷಗಳ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕಾಗುತ್ತದೆ ಎಂದರು.
ಆರ್.ಎA.ಜಿ.ಎಫ್.ಸAಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಮಾನವ ಪ್ರಪಂಚಕ್ಕೆ ದೀಪಧಾರಿಯೂ ಹೌದು ದಾರಿದೀಪವೂ ಹೌದು. ಬಾಪೂ ಭಾರತಕ್ಕೆ ಅಷ್ಟೇ ಅಲ್ಲ, ಸೌತ್ ಆಫ್ರಿಕೆಯ ನೆಲ್ಸನ್ ಮಂಡೇಲಾ,ಅಮೇರಿಕೆಯ ಡಾ.ಮಾರ್ಟಿನ್ ಲೂಥರ್ ಕಿಂಗ್ ಜ್ಯುನಿಯರ್, ಬರ್ಮಾದ ಆಂಗ್ ಸಾನ್ ಸೂಕಿ, ಐನ್ ಸ್ಟಿನ್, ಲೆಜ್ ವೇಲೆಸಾ, ಪರ್ಲ್ಬಕ್, ಬರ್ಕ್ ವೈಟ್, ರೋಮಾ ರೋಲಾ, ಲೂಯಿಸ್ ಫಿಶರ್ ಹೀಗೆ ಜಗತ್ತಿನ ಅಸಂಖ್ಯಾತ ಜನನಾಯಕರಿಗೆ ಆದರ್ಶ ಪುರುಷ ರಾಗಿದ್ದಾರೆ ಎಂದರು.
ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಾಂತಪ್ಪ ದಶವಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿವೃತ್ತ ಶಿಕ್ಷಕ ರಾಮಣ್ಣ ದಶವಂತ, ಶಿವಾನಂದ ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ ವೇದಿಕೆ ಮೇಲಿದ್ದರು.
ಗೋಷ್ಠಿಗಳು :
‘ ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು’,
‘ ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ’ ಹಾಗೂ ‘ ಜಗತ್ತಿನ ಗಣ್ಯರ ದೃಷ್ಟಿಯಲ್ಲಿ ಗಾಂಧೀಜಿ ‘ ಈ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು. ಬಾಪೂಜಿ ಕುರಿತು ಜರುಗಿದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿ / ನಿಯರಿಗೆ ಗಾಂಧಿ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅಪ್ಪಾರಾಯ ದಶವಂತ, ಬಸವರಾಜ ರೋಡಗಿ ಮತ್ತಿರಿದ್ದರು.
ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪದವಿ ಪೂರ್ವ ಕಾಲೇಜನಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಮತ್ತು ಯುವ ಮನಸುಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ನೇತಾಜಿ ಗಾಂಧಿ ಮಾತನಾಡಿದರು.