ಇಂಡಿ : ಫೆಬ್ರವರಿ ೧, ೨೦೨೨ ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುವ ಹಬ್ಬ . ಅದರಂತೆ ತಾಲ್ಲೂಕಿನ ಹಿರೇರೂಗಿ ಗ್ರಾಮದ ಪಂಚಾಯತ್ ಕಾರ್ಯಾಲಯದಲ್ಲಿ ಹಾಗೂ ಇಂಡಿ ರಸ್ತೆ ಮಡಿವಾಳ ವಸ್ತಿಯ ಹತ್ತೀರ ಇರುವ ಮಾಚಿ ದೇವರ ವೃತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಡಂಗಿ ಮಾತಾನಾಡಿದ ಅವರು, ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಅಂದರೆ ಕ್ರಿ.ಶ.೧೧೨೦ ರಿಂದ ಕ್ರಿ.ಶ.೧೧೩೦ರ ನಡುವೆ ಮಾಚಯ್ಯ/ಮಾಚಿದೇವರು ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಹೆತ್ತವರು ಪರ್ವತಯ್ಯ ಹಾಗೂ ಸುಜ್ಞಾನಮ್ಮ. ಹಿಪ್ಪರಗಿಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ತುಂಬಿರಲು ಹೊಳೆಗೋಲ ಹಂಗಿಲ್ಲದೆ ಶಿವನನ್ನು ನೆನೆದಾಗ ನದಿಯು ಇಬ್ಭಾಗವಾಗಿ ದಾರಿ ತೋರಿತು. ಈ ಮಾರ್ಗದಿಂದ ಮಾಚಿದೇವನು ನಡೆದುಕೊಂಡು ಬರುತ್ತಾನಂತೆ ಎಂದು ಪ್ರತೀತವಿದೆ. ಅದರಂತೆ ಕಾಯಕ ಮಾಡದ ಸೋಮಾರಿಗಳಂತೆ ತಿರುಗಾಡಿಕೊಂಡಿದ್ದವರ, ಬಡವರನ್ನು ಶೋಷಿಸುವವರ ಬಟ್ಟೆಗಳನ್ನು ಯಾವತ್ತೂ ಮಾಚಯ್ಯ ಶುಚಿ ಮಾಡುತ್ತಿರಲಿಲ್ಲ. ದುರ್ಗಣಗಳನ್ನು ಬಿಟ್ಟು ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪ ಸದಸ್ಯ ಜಟ್ಟಪ್ಪ ಝಳಕಿ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಚಂದ್ರಾಮ ಅಗಸರ, ಸಂಜೀವ ರೂಗಿ, ಜಟ್ಟಪ್ಪ ಸಾಲೋಟಗಿ, ಮಂಜು ತೇಲಿ, ಪರಶುರಾಮ ಅಗಸರ , ಸಂಜು ಮಡಿವಾಳ, ಬೀರಣ್ಣ ಅಗಸರ, ಜಟ್ಟಪ್ಪ ಮಡಿವಾಳ, ಬನ್ನೆಪ್ಪ ಮಡಿವಾಳ, ಶಿವಾನಂದ ಅಗಸರ, ಶ್ರೀಶೈಲ ಅಗಸರ, ಶಂಕರ್ ಮಡಿವಾಳ, ಸಿದ್ದು ಮಡಿವಾಳ, ಸಿದ್ದು ತು ಮಡಿವಾಳ ಉಪಸ್ಥಿತರು.