ಇಂಡಿಯಲ್ಲಿ ನಗರ ಸಾರಿಗೆ ಬಸ್ ಗೆ ಶಾಸಕ ಪಾಟೀಲ ಚಾಲನೆ
ಇಂಡಿ : ನಗರದ ವಿವಿಧ ವಾರ್ಡ ಜನರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಗರ ಸಾರಿಗೆ ವ್ಯವಸ್ಥೆ ಇಂದಿನಿಂದ ಪ್ರಾರಂಭಮಾಡಿದ್ದು ಸದುಪಯೋಗ ಪಡೆಯಲು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಎಸ್.ಆರ್.ಟಿ ಸಿಯಿಂದ ಇಂಡಿಯಲ್ಲಿ ನಗರ ಸಭೆಗೆ ಬಸ್ ಗೆ ಚಾಲನೆ ನೀಡಿ ಮಾತನಾಡಿದರು.
ನಿಜವಾಗಲೂ ಬಸ್ ನಿಲ್ದಾಣದಲ್ಲೆ ಚಾಲನೆ ನೀಡಬೇಕಾಗಿತ್ತು. ಆದರೆ ಬಸ್ ನಿಲ್ದಾಣ ಸ್ವಚ್ಷತೆ ಇಲ್ಲದೆ ಅವ್ಯವಸ್ಥಿತೆಯಿಂದ ಕೂಡಿದ್ದರಿಂದ ನಗರ ಬಸ್ ಸಾರಿಗೆ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಲಾಯಿತು. ಬಹುದಿನಗಳ ಹಿಂದೆ ನಗರ ಸಾರಿಗೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ಜವಾಬ್ದಾರಿ ಕೊರತೆಯಿಂದ ತಡವಾಗಿದೆ ಎಂದು ಸೂಕ್ಷ್ಮವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲೆಯಲ್ಲಿ ಅತ್ಯಂತ ಜನ ಸಂಖ್ಯೆ ಹೊಂದಿರುವ ತಾಲ್ಲೂಕು ಹಾಗೂ ನಗರ. ಈ ಭಾಗದ ಜನರಿಗೂ ಎಲ್ಲಾ ರೀತಿಯಲ್ಲೂ ಸರಕಾರದ ಸೌಲಭ್ಯ, ಸೌಕರ್ಯ ಸಿಗಬೇಕು ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಮಾತನಾಡಿ ಇಂದಿನಿಂದ ಎರಡು ನಗರ ಬಸ್ ಗೆ ಚಾಲನೆ ನೀಡಿದೆ.
ವಾಚು ನಗರದಿಂದ ಆದರ್ಶ ಶಾಲೆ ವ್ಹಾಯಾ ಬಸ್ ನಿಲ್ದಾಣ ಮತ್ತು ಕೆಈಬಿ ಮಾರ್ಗವಾಗಿ, ಸಾತಪೂರದಿಂದ ರೇಲ್ವೆ ನಿಲ್ದಾಣ ವ್ಯಾಯಾ ಬಸ್ ನಿಲ್ದಾಣ ಮತ್ತು ಸ್ಪಂದನಾ ಆಸ್ಪತ್ರೆ ಮಾರ್ಗವಾಗಿ ಪ್ರಾರಂಭಮಾಡಲಾಗಿದೆ. ಸಾರ್ವಜನಿಕರು ಸಾರಿಗೆ ಸವಲತ್ತು ಪಡೆಯಲು ಕೇಳಿಕೊಂಡರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ , ತಹಸೀಲ್ದಾರ ಬಿ.ಎಸ್.ಕಡಕಬಾವಿ, ಡಿವಾಯ್ಎಸ್ಪಿ ಜಗದೀಶ ಎಚ್ ಎಸ್, ವಿಭಾಗೀಯ ಸಂಖ್ಯಾಧಿಕಾರಿ ಎಂ.ಎಸ್.ಹಿರೇಮಠ, ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ, ತಾಂತ್ರಿಕ ಶಿಲ್ಪಿ ನಾಗರಾಜ, ಆನಂದ ಬಡಿಗೇರ, ಕಾಶಿನಾಥ ಹೊಸಮನಿ, ಆರ್.ಎಂ.ಮೊರೆ, ಜಿ.ಸಿ.ಹಿರೇಮಠ , ಸದಾಶಿವ ಪ್ಯಾಟಿ, ಜಾವೇದ ಮೋಮಿನ, ಹುಚ್ಚಪ್ಪ ತಳವಾರ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಧರ್ಮರಾಜ ವಾಲಿಕಾರ, ಜಟ್ಟೆಪ್ಪ ರವಳಿ, ಭೀಮಣ್ಣ ಕೌಲಗಿ, ಪುರಸಭೆ ಸದಸ್ಯ ಮುಸ್ತಾಕ್ ಇಂಡಿಕರ, ಉಮೇಶ ದೇಗಿನಾಳ, ಶೀವು ಬಡಿಗೇರ, ಮಹೇಶ ಹೊನ್ನಬಿಂದಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರಿದ್ದರು.
ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಎಸ್.ಆರ್.ಟಿ ಸಿಯಿಂದ ಇಂಡಿಯಲ್ಲಿ ನಗರ ಸಭೆಗೆ ಬಸ್ ಗೆ ಚಾಲನೆ ನೀಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.




















