ದಾವಲಮಲಿಕ್ ಜಾತ್ರಾಯಲ್ಲಿ ಗೀಗಿ ಪದ ಕಾರ್ಯಕ್ರಮಕ್ಕೆ ಚಾಲನೆ : ನಿರ್ದೆಶಕ ಸಿದ್ದು ಹತ್ತಳ್ಳಿ
ಇಂಡಿ: ಶತಮಾನಕ್ಕಿಂತಲೂ ಹಳೆಯದಾದ ಗೀಗಿ ಪದ ಇಂದಿಗೂ ಕೂಡಾ ಇಲ್ಲಿನ ಜನರು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆ ವಿಷಯ ಎಂದು ಸಂಗನಬಸವ ಸೌಹಾರ್ದ ಸಹಕಾರಿ ಸಂಘದ ನಿರ್ದೆಶಕ ಸಿದ್ದು ಹತ್ತಳ್ಳಿ ಹೇಳಿದರು.
ಅವರು ಗ್ರಾಮದ ಹಜರತ್ ದಾವಲಮಲಿಕ್ ಜಾತ್ರಾಯಲ್ಲಿ ಗೀಗಿ ಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಾಂಬಾ ಗ್ರಾಮದ ಜನ ನೂರ ವರ್ಷದ ಹಳೆಯದಾದ ಗೀಗಿ ಪದಾ ಇಂದಿಗೂ ಜನರ ಬಾಯಿಯಲ್ಲಿ ಜನಜನಿತವಾಗಿ, ಉಳಿದು ಬಂದಿರುವುದರ ಹಿಂದೆ ಇಲ್ಲಿನ ಕಲಾವಿದರ ಶ್ರಮ ಬಹಳಷ್ಟು ಇದೆ. ಭಾರತ ದೇಶ ವಿವಿಧ ಸಂಸ್ಕೃತಿ, ಆಚಾರ,ವಿಚಾರ, ವೇಷಭೋಷಣಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದ್ದು ಸರ್ವಜನಾಂಗ ಶಾಂತಿ, ಸಹಬಾಳ್ವೆಯೊಂದಿಗೆ ಸಾಮರಸ್ಯ ಜೀವನ ಸಾಗಿಸುತ್ತಿದ್ದಾರೆ. ಭಾರತ ದೇಶ ದೇವಾಲಯಗಳ ತೋಟಿಲು. ಇಲ್ಲಿನ ಜನತೆ ಬಹುದೇವತಾ ಆರಾಧಕರಾಗಿ ಪ್ರಕೃತಿಯಲ್ಲಿರುವ ಚರಾಚರ ವಸ್ತುಗಳನ್ನು ದೇವರ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ವಿಶೇಷವಾಗಿ ಗ್ರಾಮೀಣದಲ್ಲಿ ಜಾತ್ರೆಗಳು ಹಬ್ಬ ಹರಿದಿನಗಳು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ವಾಸಿಸುವ ಜನತೆ ಪರಸ್ಪರ ಸಾಮರಸ್ಯ ಮೂಡುತ್ತದೆ. ಇಂಡಿ ತಾಲೂಕಿನಲ್ಲಿ ಅನೇಕ ಪುಣ್ಯ ಪುರುಷರು ದಾರ್ಶನಿಕ ಸಾಧು-ಸಂತರು ನಡೇದಾಡಿ ಈ ಭಾಗದ ಜನರಿಗೆ ಒಳ್ಳೇಯ ಸಂಸ್ಕಾರ ನೀಡಿದ್ದಾರೆ. ಇಂತಹ ಮಹಾನ್ ದಾರ್ಶನಿಕ ಹಜರತ್ ದಾವಲಮಲಿಕ್ ಸಂvರÀ ಮಾರ್ಗದರ್ಶನದಿಂದ ಧಾನ ,ಧರ್ಮ ಪುಣ್ಯದ ಕೆಲಸಗಳು ಸದಾ ನಡೆಯುತ್ತಿವೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಗಂಗನಳ್ಳಿ ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು. ಜಾನಪದ ಸಾಹಿತ್ಯಕ್ಕೆ ಗ್ರಾಮೀಣ ಪ್ರದೇಶದ ಹಿರಿಯರ ಕೊಡುಗೆ ಅಪಾರ ಜಾನಪದ ಸಾಹಿತ್ಯ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಚ್ಚಾರಿತ್ರ ಬದುಕಿಗೆ ದಾರಿದೀಪವಾಗಿದೆ. ಆಧುನಿಕತೆಯ ಭರಾಟೆಯಲ್ಲಿಯೂ ಸಹ ಜಾನಪದ ಸಾಹಿತ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪುಣ್ಯಪ್ರಾಪ್ತಿ ಪಡೆಯಲು ಸಾಧ್ಯ. ಜಾನಪದ ಸಾಹಿತ್ಯ ಸರ್ವಕಾಲಿಕ ಅತ್ಯವಶ್ಯ. ಜನಪದರು ರಚಿಸಿದ ಈ ಸಾಹಿತ್ಯಕ್ಕೆ ಜನಸಾಮಾನ್ಯರೆ ಮಾಲೀಕರು, ಪಠ್ಯಪುಸ್ತಕಗಳಲ್ಲಿ ಜಾನಪದ ಸಾಹಿತ್ಯಕ್ಕೆ ಪ್ರಾಧ್ಯಾನತೆ ನೀಡಬೇಕು.
ಜಾತ್ರಾ ಕಾರ್ಯಕ್ರಮದಲ್ಲಿ ಸತೀಶ ಹಿರೇಕುರಬರ, ರಾಜಾಸಾಬ ಬಡಿಗೇರ, ಬಸವರಾಜ ಹದರಿ, ಸಲಿಂ ಚಿಕ್ಕಗಸಿ, ಬಸಪ್ಪ ಚಿಂಚೋಳಿ, ಮಹಾದೆವಪ್ಪ ಕುಂಬಾರ, ನಾಗಪ್ಪ ಗೊಂಗಿ, ನೀಲಪ್ಪ ಕಿಣಗಿ, ಬಸನಿಂಗ ಕುಂಬರ, ಶಿವಪ್ಪ ನಾಟೀಕಾರ, ಹುಸೇನಸಾಬ ಇಂಡಿ, ಇದ್ದರು.
ಸನ್ಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುAದ ಗ್ರಾಮದ ದುರ್ಗಾದೇವಿ ಗಿಂಗೀ ಪದ ಕಲಾಮೇಳ ಗಾಯಕಿ ಮಹಾದೇವಿ ದೇವರ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ಜೈ ಹನುಮಾನ ಹರದೇಶಿ ಗಿಂಗೀ ಪದ ಕಲಾಮೇಳ ಗಾಯಕ ಸುರೇಶ ಹಂಗರಗಿ ಅವರನ್ನು ಜಾತ್ರಾಕಮಿಟಿ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಬಹುಮಾನ ನೀಡಲಾಯಿತು.
ಚಿತ್ರ : ತಾಂಬಾ ಗ್ರಾಮದ ಹಜರತ್ ದಾವಲಮಲಿಕ್ ಜಾತ್ರಾಯಲ್ಲಿ ಗೀಗಿ ಪದ ಕಾರ್ಯಕ್ರಮದಲ್ಲಿ ಕಂಬಾಗಿ ಗ್ರಾಮದ ಜೈ ಹನುಮಾನ ಹರದೇಶಿ ಗಿಂಗೀ ಪದ ಕಲಾಮೇಳ ಗಾಯಕ ಸುರೇಶ ಹಂಗರಗಿ ಅವರನ್ನು ಜಾತ್ರಾಕಮಿಟಿ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಬಹುಮಾನ ನೀಡಲಾಯಿತು.