ಧ್ವಜಾರೋಹಣದ ಕಟ್ಟಿಯ ನಿರ್ಮಾಣದ ಭೂಮಿ ಪೂಜೆ
ಇಂಡಿ : ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಮುಂದೆ ಧ್ವಜಾರೋಹಣದ ಕಟ್ಟಿಯ ನಿರ್ಮಾಣದ ಭೂಮಿ ಪೂಜೆಯನ್ನು ಪ್ರಶಾಂತ್ ಎಮ್ ಬೈರಾಮಡಗಿ ನೇರವೇರಿಸಿದರು.
ದಿವಂಗತ M.D. ಬೈರಾಮಡಗಿ ಶಿಕ್ಷಕರ ಸಮಾನಾರ್ಥ ಅವರ ಸುಪುತ್ರರಾದ ಪ್ರಜ್ವಲ್ ಮತ್ತು ಪ್ರಶಾಂತ್ ಶಾಲೆಯ ಮುಂದೆ ನಿರ್ವಹಿಸುತ್ತಿರುವ ಸುಂದರವಾದ ಧ್ವಜದ ಕಟ್ಟಿಯನ್ನು ಕಟ್ಟಲು ರೂ 50 ರಿಂದ 60 ಸಾವಿರ ರೂಪಾಯಿ ನೀಡುತ್ತೇನೆಂದು ಹೇಳಿದ್ದಾರೆ.
ಇಂತಹ ಶಿಕ್ಷಣ ಪ್ರೇಮಿಗಳಿಗೆ ಶಾಲೆಯ ಮುಖ್ಯ ಗುರುಗಳು, ಎಸ್. ಡಿ. ಎಂ. ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗ, ಮತ್ತು ಗ್ರಾಮಸ್ಥರು ಅಭಿನಂದನೆಗಳು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಪಿಕೆ ಬಿರಾದಾರ್ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಿದ್ದು ಹತ್ತಳ್ಳಿ, ಉಪಾಧ್ಯಕ್ಷ ವಿಠಲ್ ಹೋರ್ತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಮಚಂದ್ರ ದೊಡ್ಡಮನಿ, ಸದಸ್ಯರಾದ ಪರಸು ಬಿಸನಾಳ, ರೇವಪ್ಪ ಹೋರ್ತಿ ಮುಂತಾದವರು ಪಾಲ್ಗೊಂಡಿದ್ದರು