ಕೃಷ್ಣಾ ಮುಖ್ಯ ಕಾಲುವೆಗೆ ನೀರು
ಇಂಡಿ : ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ ಎಂದು ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆ, ಅದಲ್ಲದೆ ನಾಗಠಾಣ ಬ್ರಾಂಚ್ ಕಾಲುವೆ ನೀರು ಬಿಡಲಾಗಿದೆ.
ಮುಖ್ಯ ಕಾಲುವೆಗೆ ಕಳೆದ ಐದು ದಿನಗಳ ಹಿಂದೆಯೇ ಬಿಡಲಾಗಿದ್ದು ಚಡಚಣ ದಸೂರ ಮೂಲಕ ಭೀಮಾ ನದಿ ಸೇರುತ್ತಿದೆ ಮತ್ತು ಇಂಡಿ ಹಳ್ಳಕ್ಕೆ ನೀರು ಬಿಟ್ಟಿದ್ದು ಅದೂ ಕೂಡ ಭೀಮಾ ನದಿಗೆ ಸೇರುತ್ತಿದೆ ಎಂದು ಮನೋಜಕುಮಾರ ತಿಳಿಸಿದ್ದಾರೆ.