VOJ ನ್ಯೂಸ್ ಡೆಸ್ಕ್: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದೆ. 1998 ರ ಈ ಪ್ರಕರಣದ ವರ್ಗಾವಣೆ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಅಂಗೀಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಇನ್ಮುಂದೆ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಈ ನಿರ್ಧಾರದ ಪ್ರಕಾರ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳು ಇನ್ಮುಂದೆ ಹೈಕೋರ್ಟ್ನಲ್ಲಿ ವಿಚಾರಣೆಗೊಳಪಡಲಿದೆ.
ಸಲ್ಮಾನ್ ಖಾನ್ ಸಿನಿಮಾ ಶೂಟಿಂಗ್ಗೆಂದು ರಾಜಸ್ಥಾನದಲ್ಲಿ ಕಂಕಣಿಯಲ್ಲಿದ್ದಾಗ 2 ಕೃಷ್ಣಮೃಗಗಳನ್ನು ಬೇಟೆಯಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.