ಕಾಶಪ್ಪನವರ ಹೇಳಿಕೆಗೆ ಪಂಚಮಸಾಲಿ ಸಂಘದಿಂದ ಖಂಡನೆ
ಇಂಡಿ : ಪಂಚಮಸಾಲಿ ಸಮಾಜಕ್ಕೆ ಅದರದೇ ಆದ ಟ್ರಸ್ಟ ಮಾಡಲಾಗಿದೆ. ಅದಕ್ಕೆ ಶಿಷ್ಟಾಚಾರ ಇದೆ. ಅದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಕೊಳ್ಳಲಾಗುವದು ಎಂದು ಹೇಳಿರುವ ಕಾಸಪ್ಪನವರ ಹೇಳಿಕೆಯನ್ನು ಇಂಡಿ ತಾಲೂಕಾ ಪಂಚಮಸಾಲಿ ಸಂಘದ ತಾಲೂಕಾ ಅಧ್ಯಕ್ಷ ವಿ.ಎಚ್.ಬಿರಾದಾರ ಖಂಡಿಸಿದ್ದಾರೆ.
ಇಂಡಿಯ ಅಮರ ಇಂಟರ್ ನ್ಯಾಶನಲ್ ಹೋಟೆಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲ ಸಂಗಮದಲ್ಲಿ ಟ್ರಸ್ಟ ಎಂಬುದು ಇದೆ. ಆದರೆ ಮಂಡಳಿಯ ಸದಸ್ಯರು ಬರುವದೇ ಇಲ್ಲ. ಮತ್ತು ಟ್ರಸ್ಟಕ್ಕೆ ಸೇರಬೇಕಾದ ಆಸ್ತಿ ಲೂಟಿಸಿದ್ದಾರೆ. ಕಾಶಪ್ಪನವರ ಹೇಳಿಕೆ ಸಮಾಜಕ್ಕೆ ನೋವುಂಟೆ ಮಾಡಿದೆ. ಜಯ ಮೃತ್ಯುಂಜಯ ಶ್ರೀಗಳು ಕಣ ್ಣರು ಹಾಕಿರುವದು ಎಲ್ಲರಿಗೂ ನೋವು ತಂದಿದ್ದು ಪ್ರತಿ ಹನಿಯ ಬೆಲೆ ತೆತ್ತಬೇಕಾಗುತ್ತದೆ. ಈ ದಿಶೆಯಲ್ಲಿ ಏ. ೨೦ ರಂದು ೩ ಗಂಟೆಗೆ ಕೂಡಲ ಸಂಗಮದಲ್ಲಿ ಸಭೆಯನ್ನು ಕರೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಜನಾಂಗ ಸಮಾಜ ಬಾಂಧವರು ಸೇರಿ ತಕ್ಕ ಉತ್ತರ ಕೊಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಾಳು ಮುಳಜಿ, ಶರಣು ಬಂಡಿ, ಚಿದುಗೌಡ ಬಿರಾದಾರ, ಸೋಮು ದೇವರ,ರಮೇಶ ಬಿರಾದಾರ, ಪ್ರಶಾಂತಗೌಡ ಬಿರಾದಾರ ಮತ್ತಿತರಿದ್ದರು.
ಇಂಡಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಪತ್ರಿಕಾಗೋಷ್ಠಿಯಲ್ಲಿ ವಿ.ಎಚ್. ಬಿರಾದಾರ ಮಾತನಾಡಿದರು.




















