ಕರ್ನಾಟಕ ಕೋ -ಆಪ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ ದ -ವಾರ್ಷಿಕ ಮಹಾ ಸಭೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಮುದ್ದೇಬಿಹಾಳ ದ ಕರ್ನಾಟಕ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಇದರ ವಾರ್ಷಿಕ ಮಹಾ ಸಭೆ ಜರುಗಿತು.
ಕಳೆದ 66 ವರ್ಷಗಳಿಂದ ಮುದ್ದೇಬಿಹಾಳ ದ ತಾಲ್ಲೂಕಿನ ಎಲ್ಲ ವ್ಯಾಪಾರಸ್ಥರು, ಉದ್ಯಮಿಗಳಿಗೆ, ಮತ್ತು ವೃತ್ತಿಪರ ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಾ , ಪ್ರಗತಿ ಪಥದಲ್ಲಿ ಮತ್ತು ಲಾಭದಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ ಹೇಳಿದರು.
ಇಲ್ಲಿನ ಎಂಪಿಎಂಸಿ ಆವರಣದಲ್ಲಿ ಇರುವಕರ್ನಾಟಕ ಕೋ-ಆಪ್ ಬ್ಯಾಂಕ್ ಸಭಾ ಭವನದಲ್ಲಿ ಸಾಮನ್ಯ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 1776.25 ಲಕ್ಷ ಆದಾಯ ಗಳಿಸಿದ್ದು, ರೂ. 387.75 ಲಕ್ಷ ಲಾಭ ಸಂಪಾದಿಸಿ, 145.67 ಲಕ್ಷ ಕರಡು ಸಾಲ ನಿಧಿಗೆ, 142.60 ಲಕ್ಷ ಆದಾಯ ತೆರಿಗೆ ಪಾವತಿಸಿ, ಒಟ್ಟು ನಿವ್ವಳ ಲಾಭ 99.48 ಲಕ್ಷ ಗಳಿಸಿದೆ ಹಾಗು ಎಲ್ಲ ಸದಸ್ಯರಿಗೆ “ಅಪಘಾತ ವಿಮೆ ಸೌಲಭ್ಯ” ಮತ್ತು ” “ಲಾಕರ್ ವಿಮೆ ಸೌಲಭ್ಯ” ವನ್ನ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಶೇಖರ ಕರಡ್ಡಿ ಅವರು ವರದಿ ವಾಚನದಲ್ಲಿ ದಿನಾಂಕ 31-3-2025 ಕೆ ಇದ್ದಂತೆ ಶೇರು ಬಂಡವಾಳ ರೂ.504.82 ಲಕ್ಷ, ಕಾಯ್ದಿರಿಸಿದ ಹಾಗು ಇತರ ನಿಧಿಗಳು ರೂ. 3076.29 ಲಕ್ಷ, ಠೇವಣಿಗಳು ರೂ.16199.20 ಲಕ್ಷ, ಹೂಡಿಕೆಗಳು
ರೂ. 8534.41 ಲಕ್ಷ, ಸಾಲ ಮತ್ತು ಮುಂಗಡಗಳು
ರೂ.10072.10 ಲಕ್ಷ, ದುಡಿಯುವ ಬಂಡವಾಳ ರೂ.20209.24 ಲಕ್ಷ, ಇರುವದು ಹಾಗು ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇಕಡಾ 4.69 ರಷ್ಟು ಇದ್ದು, ಹೂವಿನ ಹಿಪ್ಪರಗಿ ಶಾಖೆಯು ರೂ.23.24 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ವೃತ್ತಿಪರ ನಿರ್ದೇಶಕರಾದ ನಾಗಭೂಷಣ ನಾವದಗಿ ಅವರು ಮುಂಬರುವ ದಿನಗಳಲ್ಲಿ ಡಿಜಿಟಲ್ ಪೇಮೆಂಟ, ಚೆಕ್ ಕ್ವೀಯರಿಂಗ ಸೌಲಭ್ಯ ಮತ್ತು ಹೊಸ ಶಾಖೆಗಳ ಪ್ರಾರಂಭದ ಕುರಿತು ತಿಳಿಸಿದರು.
ಇದೆ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪೀ.ಯು.ಸಿ ಹಾಗು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಾದ ಶ್ರೇಯಾ ಕತ್ತಿ, ಸ್ಪೂರ್ತಿ ಹತ್ತಿಕಾಳ, ಕೃತಿಕಾ ಬಿದರಕುಂದಿ, ಬನಶ್ರೀ ಮುದ್ದೇಬಿಹಾಳ, ಸಂಜನಾ ಧನ್ನೂರ, ಅನುಶ್ರೀ ದಡ್ಡಿ, ಸೌಮ್ಯಶ್ರೀ ದಡ್ಡಿ, ಅರುಣ ಓನರೊಟ್ಟಿ, ಶಿವರಾಜ್ ಕರಡಿ, ಅನುಷಾ ನಾಗಠಾಣ, ಸಾಗರ್ ಕುಮಾರ ಬಿರಾದಾರ, ಸುಷ್ಮಾ ಯಗಟಿ, ಹಾಗು ತರುಣ್ ಜೈನ್ ಇವರನ್ನು ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಧಾನ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಬಿದರಕುಂದಿ ಅವರು ಸನ್ 2025-26 ನೆಯ ಸಾಲಿನ ಅಂದಾಜು ಆಯ-ವ್ಯಯದ ಮುಂಗಡ ಪತ್ರ , ನಿವ್ವಳ ಲಾಭ ದ ವಿಲೇವಾರಿ ಮತ್ತು ಸನ್ನದು ಲೆಕ್ಕ ಪರಿಶೋಧಕರ ನೇಮಕಾತಿಗಾಗಿ ಸಭೆಗೆ ವಿಷಯ ಮಂಡಿಸಿ ಅನುಮೋದನೆಯನ್ನು ಪಡೆದರು.
ಲಾಭಾಂಶ ಪ್ರಮಾಣವನ್ನು ಶೇಕಡಾ 10 ರಿಂದ ಶೇಕಡಾ 12 ಕೆ ನಿಗದಿಪಡಿಸಲು ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಒತ್ತಾಯಿಸಿದರು, ಅದರಂತೆ ಸಭೆಯು ಲಾಭಾಂಶ ವನ್ನು ಶೇಕಡಾ 12 ರಂತೆ ನೀಡಲು ತೀರ್ಮಾನಿಸಿದರು.
ಸದಸ್ಯರ ಅವಧಿ ಮುಗಿದ ಠೇವಣಿ ಮೇಲಿನ ಬಡ್ಡಿ ದರ, ವೃತ್ತಿಪರ ನಿರ್ದೇಶಕರ ಕೋ-ಆಪ , ಮತ್ತು ಇತರ ಪ್ರಶ್ನೆಗಳಿಗೆ ನಿಕಟ ಪೂರ್ವ ಅಧ್ಯಕ್ಷರು ಹಾಗು ಹಾಲಿ ನಿರ್ದೇಶಕರಾದ ಸತೀಶ ಕುಮಾರ ಒಸವಾಲ ಅವರು ಸಮರ್ಪಕ ಉತ್ತರ ನೀಡಿದರು.
ಉಪಾಧ್ಯಕ್ಷರಾದ ಗುರುಲಿಂಗಪ್ಪಗೌಡ ಪಾಟೀಲ್ ಸ್ವಾಗತ ಕೋರಿದರು, ವೃತ್ತಿಪರ ನಿರ್ದೇಶಕರಾದ ರವಿ ಗೂಳಿ ವಂದಿಸಿದರು.
ವೇದಿಕೆ ಮೇಲೆ ಸಂಗನಗೌಡ ಬಿರಾದಾರ, ಪ್ರಭುದೇವ ಕಲಬುರ್ಗಿ, ನಿಂಗಣ್ಣ ಚಟ್ಟೆರ, ಅಜೀತ ನಾಗಠಾಣ, ಚಂದ್ರಶೇಖರ ಸಜ್ಜನ, ಶ್ರೀಕಾಂತ ಚಲವಾದಿ, ಶ್ರೀಶೈಲ ಪೂಜಾರಿ, ಶ್ರೀಮತಿ ವಿಜಯ ಲಕ್ಷ್ಮಿ ಬೂದಿಹಾಳ ಮಠ, ಹಾಗು ರಕ್ಷಿತಾ ಬಿದರಕುಂದಿ ಇದ್ದರು. ಸಭೆಗೆ ಸುಮಾರು 3000 ಮೇಲ್ಪಟ್ಟು ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಭೆಯಲ್ಲಿ ಬಿ.ಸಿ. ಮೋಟಗಿ, ಎಂ. ಬಿ. ನಾವದಗಿ, ದಾನಪ್ಪ ನಾಗಠಾಣ, ಗುಲಾಬಚಂದ್ ಒಸವಾಲ್, ಬಾಬುಲಾಲ್ ಒಸವಾಲ್, ಬಸವರಾಜ ನಾವದಗಿ, ಶರಣಯ್ಯ ಹಿರೇಮಠ, ಪ್ರೊ. ಬಿ. ಎಂ. ಹಿರೇಮಠ, ಎಂ.ಎಸ್. ಬಿದರಕೋಟಿ, ನಿಂಗರಡ್ಡಿ ಮಂಗ್ಯಾಳ, ಬಾಬು ಬಿರಾದಾರ,ಶಶಿಕಾಂತ ಮಾಲಗತ್ತಿ, ಮುತ್ತು ಕಡಿ, ಅನೇಕ ಗಣ್ಯರು ಸೇರಿದಂತೆ ಉಪಸ್ಥಿತರಿದ್ದರು.