ಕೆಇಎ ನೀಡುವ ಪ್ರತಿಷ್ಠಿತ ಛಾಯಾ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿದ ಪತ್ರಕರ್ತರಾದ ಕಾಂಚಳ್ಳಿ ಬಸವರಾಜು
ವರದಿ : ಚೇತನ್ ಕುಮಾರ್ ಎಲ್, ಚಾಮರಾಜನಗರ
ಬೆಂಗಳೂರು :ಪ್ರತಿವರ್ಷವು ರಾಜ್ಯಮಟ್ಟದ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘವು ನೀಡುವ ಅತ್ಯುತ್ತಮ ಪ್ರಶಸ್ತಿಯನ್ನು ಛಾಯಾ ಗ್ರಾಹಕರಿಗೆ ನೀಡುತ್ತ ಬಂದಿದೆ. ಈ ವರ್ಷದ ಪ್ರಶಸ್ತಿಯನ್ನು ಪತ್ರಕರ್ತರಾದ ಶ್ರೀ ಯುತ ಕಾಂಚಳ್ಳಿ ಬಸವರಾಜು ರವರಿಗೆ ನೀಡಿರುವುದು ನಮ್ಮ ಹೆಮ್ಮೆಯ ವಿಷಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ .ಸಿ ತಿಳಿಸಿದರು.
ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಎರಡು ಸಾವಿರದ ಇಪ್ಪತೈದನ ಇಸವಿಯಲ್ಲಿ ನೀಡುಲಾಗುತ್ತದೆ ಅದಕ್ಕೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದ ಪತ್ರಕರ್ತರಾದ ಕಾಂಚಳ್ಳಿ ಬಸವರಾಜು ಭಾಜನರಾಗಿದ್ದಾರೆ, ಇವರು ಚಾಮರಾಜನಗರ ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದು , ಛಾಯಾ ಗ್ರಹಣದಲ್ಲಿ ಮಾಡಿರುವ ಸಾಧನೆ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಡಿ ಜಿ ಇಮೇಜ್ ೨೦೨೫ರ ವಸ್ತುಪ್ರದರ್ಶನದಲ್ಲಿ ಸಮಸ್ತ ಛಾಯಾಗ್ರಾಹಕರ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಪ್ರಶಸ್ತಿ ಪತ್ರಕ್ಕೆ ಬಾಜನರಾಗಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಕಾರ್ಯದರ್ಶಿಗಳಾಗಿ , ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲ್ಲೂಕು ಸಂಘಟನ ಕಾರ್ಯದರ್ಶಿಯಾಗಿ ,ಯುವ ಮುಖಂಡರಾಗಿ ಹಲವಾರು ಸಂಸ್ಥೆಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಕೆಲವು ಸಂಸ್ಥೆಗಳಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ನಮ್ಮ ಸಂಘದ ಪರವಾಗಿ ಶುಭವಾಗಲಿ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಡಿಜಿ ಇಮೇಜ್ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಛಾಯಶ್ರೀ , ಛಾಯಾ ಸಾಧಕ ಪ್ರಶಸ್ತಿಯನ್ನು ಹಲವಾರು ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯುತ ಪತ್ರಕರ್ತರಾದ ಬಸವರಾಜು ಚಾಮರಾಜನಗರ ಜಿಲ್ಲೆಯ ಛಾಯಾ ಚಿತ್ರ ಗ್ರಾಹಕರ ಸಂಘ . ಈ ಅಭೂತಪೂರ್ವ ಗೌರವ ಸಮರ್ಪಣೆಗೆ ನನ್ನನ್ನು ಸರ್ವಾನು ಮತದಿಂದ ಆಯ್ಕೆ ಮಾಡಿ ರಾಜ್ಯ ಸಂಘಕ್ಕೆ ಕಳುಹಿಸಿದ ನನ್ನಚಾಮರಾಜನಗರ ಜಿಲ್ಲಾ ಹಾಗೂ ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘ* ಹಾಗೂ ಈ ಆಯ್ಕೆಗೆ ಸಹಮತ ಸೂಚಿಸಿದ ” ಚಾಮರಾಜನಗ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘ ಹಾಗೂ ನನ್ನೆಲ್ಲಾ ಛಾಯಾಗ್ರಾಹಕ ಮಿತ್ರರಿಗೆ ಹಾಗೂ ನನಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ ನನ್ನೆಲ್ಲಾ ಆತ್ಮೀಯ ಮಿತ್ರರಿಗೆ ಕೃತಜ್ಞತಾ ಪೂರ್ವಕ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದರು.
ಸನ್ಮಾನಕ್ಕೆ ಭಾಜನರಾದ ಪತ್ರಕರ್ತರಾದ ಕಾಂಚಳ್ಳಿ ಬಸವರಾಜುರವರಿಗೆ ,ಕರ್ನಾಟಕ ಪತ್ರಕರ್ತರ ಸಂಘದ ಪಧಾದಿಕಾರಿಗಳು ,ಕರ್ನಾಟಕ ರಾಜ್ಯ ರೈತ ಸಂಘದ ಎಲ್ಲಾ ಸದಸ್ಯರುಗಳು , ಹಾಗೂ ಹನೂರು ಫೋಟೋಗ್ರಾಫರ್ ಸಂಘಟನೆ ಗಳ ಸಮಿತಿಯ ಅಧ್ಯಕ್ಷರಾದಿಯಾಗಿ ಎಲ್ಲಾರು ಶುಭ ಕೋರಿದರು.



















