ಮುದ್ದೇಬಿಹಾಳ ; ಗಂಗೂರು ,ಕುಂಚಗನೂರು ಕಮ್ಮಲದಿನ್ನಿ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮತ್ತು ಈ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ಮಾಡಿಲ್ಲಾ ಏರ್ ಟ್ಯಾಂಕ್ ಎತ್ತರದ ಪ್ರದೇಶದಲ್ಲಿ ಕಟ್ಟಿದ್ದಾರೆ, ಮತ್ತು ಕೆಲ ಗ್ರಾಮಗಳಲ್ಲಿ ಜಲಧಾರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಶಾಸಕ ಹಾಗೂ ಕೆಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಅವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕ ಸಿ.ಎಸ್ ನಾಡಗೌಡ ತಾಲೂಕಿನಲ್ಲಿ ಯಾವೆಲ್ಲಾ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ನೀರು ಬಂದಿಲ್ಲಾ ಅವನ್ನು ಹಸ್ತಾಂತರ ಮಾಡಬೇಡಿ ರಿಪೋರ್ಟ್ ಮಾಡಿ ಎಂದು ತಾಪಂ ಇಒ ನಿಂಗಪ್ಪ ಮಸಳಿಗೆ ಸೂಚಿಸಿ ಪ್ರತಿ ಪಂಚಾಯತಿಯಲ್ಲಿ ಕಮಿಟಿ ಮಾಡಿ ಸಮೀಕ್ಷೆ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕರೆಯಿಸಿ ಸಮೀಕ್ಷೆ ಆಧಾರದ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿ ಅವರ ಮಾತನಾಡಿದರು.
ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಪಂಚಾಯತಿ ಗ್ರಾಮ ಸಂಪರ್ಕ ಸಭೆ ತಂಗಡಗಿಯ ಚರಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ನಡೆಯಿತು.
ತಂಗಡಗಿ ಗ್ರಾಮದಲ್ಲಿ ಹಾಸ್ಟೆಲ್ ಮಾಡುವಂತೆ ಗ್ರಾಮಸ್ಥರ ಮನವಿಗೆ ಉತ್ತರಿಸಿದ ಶಾಸಕ ನಾಡಗೌಡ ಈ ಬಗ್ಗೆ ಸಚಿವ ಶಿವರಾಜ ತಂಗಡಗಿ ಅವರಿಗೆ ನೀವು ಹುಟ್ಟಿದ ಊರಾದ ತಂಗಡಗಿ ಹಾಗೂ ತಾಳಿಕೋಟೆ ಗೆ ಹಾಸ್ಟೆಲ್ ಮಾಡಲು ಹೇಳಿದ್ದೇನೆ ತಂಗಡಗಿಯ ಗ್ರಾಮಸ್ಥರು ಒತ್ತಾಯಿಸಬೇಕು ಎಂದರು.
ತಂಗಡಗಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಿದ ಕೆಎಸ್ಎಲ್ಡಿ ಅಧಿಕಾರಿಗಳು ಮನೆಯವರಿಗೆ ಪರಿಹಾರ ಧನವನ್ನು ಈಗಾಗಲೇ ನೀಡಿದ್ದರು ಜನ ಸ್ಥಳಾಂತರವಾಗದೆ ಅಲ್ಲೆ ಇರುವುದು ತಪ್ಪು ಎಂದ ಶಾಸಕರಿಗೆ ನಮಗೆ ಪ್ಲಾಟ್ ಕೂಡ್ತನೆ ಅಂದಿದ್ರು ಮನೆ ಕಟ್ಟಸಿಕೂಡ್ತನೆ ಅಂದಿದ್ರು ಅಂತ ಗ್ರಾಮಸ್ಥರು ಹೇಳಿದರು ಇದಕ್ಕೆ ಶಾಸಕರು ರಸ್ತೆ ಮಾಡಲು ಬಂದವರು ಸೈಟ್ ಹ್ಯಾಗೆ ನೀಡ್ತಾರೆ ಪಂಚಾಯತಿ ಅವರಿಗೆ ಕೇಳಿ ಎಂದರು.
ತಂಗಡಗಿಯ ಹಳ್ಳದ ದಾರಿ, ತಂಗಡಗಿ ಕೋಳೂರು ರಸ್ತೆ , ಹೋಲಕ್ಕೆ ಹೋಗುವ ರಸ್ತೆ ಸಮಸ್ಯೆ ,ಶಾಲಾ ಕಟ್ಟಡ, ಚರಲಿಂಗೇಶ್ವರ ದೇವಾಲಯ ಕಲ್ಯಾಣ ಮಂಟಪಕ್ಕೆ ಅನುದಾನ, ಅಮರಗೂಳದ ೨೦೦ ಎಕಜೆ ಸವಳು ಜವಳು, ತಂಗಡಗಿಗೆ ಸರಕಾರಿ ಪದವಿ ಕಾಲೇಜು ಅಥವಾ ಜ್ಯೂನಿಯರ್ ಕಾಲೇಜು, ಬಡಿಗತನ ವೃತ್ತಿಗೆ ಸ್ಥಳಾವಕಾಶ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಜನ ಸಂಪರ್ಕ ಸಭೆಯಲ್ಲಿ ಶಾಸಕರ ಗಮನಕ್ಕೆ ಗ್ರಾಮಸ್ಥರು ತಂದರು.
ಸಭೆಯಲ್ಲಿ ಮಹಿಳೆಯರು ಗೃಹಲಕ್ಷ್ಮೀ ಹಣ ಬಂದಿಲ್ಲವೆಂಬ ಪ್ರಶ್ನೆಗೆ ನಿನ್ನೆ ಬಜೆಟ್ ಅನುಮೋದನೆಯಾಗಿದೆ ಎಪ್ರಿಲ್ ಮೇ ಒಳಗೆ ಬಾಕಿ ಇರುವ ಹಣ ಜಮೆಯಾಗುತ್ತದೆ ಎಂದು ಶಾಸಕರು ವಿರೋಧ ಪಕ್ಷದವರು ಸಾರ್ವಜನಿಕರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಹೇಳುತ್ತಾರೆ ಗ್ಯಾರಂಟಿ ಯೋಜನೆಗಳು ಅವಶ್ಯಕತೆ ಇದೆ ಇಲ್ವೋ ಮಹಿಳೆಯರು ಕೈ ಎತ್ತಿ ಅಂದಾಗ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇದೆ ಎಂದು ಮಹಿಳೆಯರು ಕೈ ಎತ್ತಿದರು.
ಜನ ಸಂಪರ್ಕ ಸಭೆಯಲ್ಲಿ ಪಿಡಿಒ ಮುತ್ತು ಗಣಾಚಾರಿ, ಗ್ರಾಪಂ ಅಧ್ಯಕ್ಷೆ ಶಂಕ್ರವ್ವ ಮಾದರ, ಸಮಾಜ ಕಲ್ಯಾಣ ಅಧಿಕಾರಿ ಬಿ ಜಿ ಮಠ, ಬಿಇಒ ಬಿ ಎಸ್ ಸಾವಳಗಿ, ಸಿಡಿಇಓ ಶಿವಮೂರ್ತಿ ಕುಂಬಾರ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಬಾಪುರಾವ ದೇಸಾಯಿ, ಬಾಕ್ಲ್ ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಗುರು ತಾರನಾಳ, ಅಶೋಕ ಬಿರಾದಾರ, ಎಂ ಎಂ ಬೆಳಗಲ್ಲ, ಶಿವಾನಂದ ಮೇಟಿ, ಶಿವಲೀಲಾ ಕಣ್ಣೂರ, ಸತೀಶ ತಿವಾರಿ, ತಂಗಡಗಿ ಗ್ರಾಮದ ಮುಖಂಡರಾದ ಗುತ್ತಿಗೆದಾರ ರಾಜುಗೌಡ ಕೊಂಗಿ, ಮಾಜಿ ತಾಪಂ ಸದಸ್ಯ ಶ್ರೀಶೈಲ ಮುರಾಳ, ಬಸವರಾಜ ಇಸ್ಲಾಂಪೂರ, ಪಂಚಾಯತಿ ಕಾರ್ಯದರ್ಶಿ ಪರಶುರಾಮ ಚಲವಾದಿ, ತಂಗಡಗಿ, ಗಂಗೂರ, ಕಮ್ಮಲದಿನ್ನಿ, ಕುಂಚಗನೂರು,ಅಮರಗೋಳ, ಗ್ರಾಮಸ್ಥರು ಮಹಿಳೆಯರು ಭಾಗವಹಿಸಿದ್ದರು.
© 2025 VOJNews - Powered By Kalahamsa Infotech Private Limited.