ಜಗದ್ಗುರು ಶ್ರೀ ರೇಣುಕಚಾರ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು
ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು : ಶ್ರೀ ರೇಣುಕಚಾರ್ಯ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತದೆ ಇದು ಸಂಭ್ರಮದ ವಿಷಯ ಆದರೆ ಅವರ ಚರಿತ್ರೆಯನ್ನು ಜಗತ್ತಿನಲ್ಲಿ ಮಾನವ ಜೀವಿಗಳೆಲ್ಲರು ಪಾಲಿಸಿದರೆ ಮನುಜ ಮಥವು ಸುಖಕರವಾಗಿದೆ . ಕಾಯಕತತ್ವ ಮತ್ತು ಅನ್ನದಾಸೋಹಕ್ಕೆ ಹೆಸರುವಾಸಿಯಾದ ಧರ್ಮವೆ ವೀರಶೈವ ಧರ್ಮ ಪಂಚಪೀಠಗಳಲ್ಲಿ ಒಂದಾದ ಮಠವು ಇದಾಗಿದೆ. ಇಲ್ಲಿ ವ್ಯಕ್ತಿ ಗಿಂತ ತತ್ವ ,ನಿಷ್ಠೆಯನ್ನು ಹೊಂದಿರುವ ಸಮಾಜವಾಗಿದೆ ಎಂದು ಹನೂರು ತಾಲ್ಲೂಕು ಬಿಇಒ ಗುರುಲಿಂಗಯ್ಯ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ಮಾತನಾಡಿದ ಸೋಮಶೇಖರ್ ಮಾತನಾಡಿ ರಾಷ್ಟ್ರೀಯ ಹಬ್ಬಗಳ ಆಚರಣೆ ವತಿಯಿಂದ ಆಚರಿಸಲಾಗುತ್ತದೆ ಇವರ ಮೂಲ ಸಂದೇಶ ಮಾನವ ಧರ್ಮಕ್ಕೆ ಜಯವಾಗಲಿ ಎಂಬುದಾಗಿದೆ ,ಎಂದು ಸಾರಿದವರು ಇವರ ಆದರ್ಶವೆ ನಮಗೆ ಪ್ರೇರಣೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ,ಸದಾಶಿವಮೂರ್ತಿ . ಮುರುಡೇಶ್ವರ ಸ್ವಾಮಿ ,ಜಗದಿಶ್ ,ಉಮೇಶ್ ಆನಾಪುರ ,ವಿನೋದ್ , ಹಾಗೂ ಅಧಿಕಾರಿಗಳಾದ ರಾಜೇಶ್ ಶೇಷಣ್ಣ ಕಾವ್ಯ ,ನಾಗೇಂದ್ರ ಸೇರಿದಂತೆ ಇನ್ನಿತರರು ಮುಖಂಡರುಗಳು ಹಾಜರಿದ್ದರು.