ಸಾವಯುವ ಉತ್ತೇಜಿಸುವ ಮೂಲಕಮಣ್ಣಿನಣ ಗುಣಧರ್ಮ ಕಾಪಾಡುವದು ಮುಖ್ಯ
ಇಂಡಿ : ರಸಗೊಬ್ಬರಗಳ ಸುಸ್ಥಿರ ಮತ್ತು ಸಮತೋಲಿತ ಬಳಕೆಯನ್ನು ಉತ್ತೇಜಿಸುವದು ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳುವದು ಸಾವಯುವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ಭೂಮಿ ತಾಯಿಯ ಆರೋಗ್ಯವನ್ನು ಉಳಿಸುವ ಸಾವಯುವ ಕೃಷಿಯ ಅವಶ್ಯಕತೆ ಇದೆ ಎಂದು ಕೃಷಿ ಉಪ ನಿರ್ದೇಶಕರು ಇಂಡಿಯ ಚಂದ್ರಕಾAತ ಪವಾರ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮದ್ರಾಸ ಫರ್ಟಿಲೈಜರ್ಸ ಸಹಯೋಗದಲ್ಲಿ ನಡೆದ ಸಾವಯುವ ಕೃಷಿ ಮತ್ತು ಚರ್ಚಾಕೂಟದಲ್ಲಿ ಮಾತನಾಡಿದರು.
ಸ್ವಾತಂತ್ರಾö್ಯನAತರ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸಿಗುತ್ತಿರಲಿಲ್ಲ. ಹೀಗಾಗಿ ಹಸಿರು ಕ್ರಾಂತಿಯ ಮೂಲಕ ರಸಗೊಬ್ಬರಕ್ಕೆ ಉತ್ತೇಜನ ನೀಡಿ ಹೆಚ್ಚು ಆಹಾರ ಉತ್ಪಾದನೆಯಾಗ ತೊಡಗಿತು. ಆದರೆ ಹೆಚ್ಚಿನ ರಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ಮಣ ್ಣನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಸಾವಯುವ ಗೊಬ್ಬರಗಳು ದೀರ್ಘಾವಧಿಯಲ್ಲಿ ಮಣ ್ಣನ ಆರೋಗ್ಯವನ್ನು ಸುಧಾರಿಸಲು ಕೊಡುಗೆ ನೀಡುತ್ತಿವೆ ಎಂದರು.
ಮದ್ರಾಸ ಫರ್ಟಿಲೈಜರ್ಸನ ಪ್ರಾದೇಶಿಕ ವ್ಯವಸ್ಥಾಪಕ ಪುರುಷೊತ್ತಮ ರೆಡ್ಡಿ ಮಾತನಾಡಿ ರಸಾಯನಿಕ ಗೊಬ್ಬರಗಳು ಆಧುನಿಕ ಕೃಷಿಯ ಅವಿಭಾಜ್ಯ ಅಂಗವಾಗಿವೆ. ಪರಿಸರ ಸ್ನೇಹಿ ಜೈವಿಕ ರಸಗೊಬ್ಬರಗಳು ಮತ್ತು ಸಾವಯುವ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಹೆಚ್ಚುವರಿ ವ್ಯವಸ್ಥಾಪಕ ಬಿ.ಬಿ.ಪಾಟೀಲ ಮಾತನಾಡಿ ಸಾವಯುವ ಬಳಕೆಯಿಂದ ಮಣ ್ಣನ ಆರೋಗ್ಯ ಮತ್ತು ಪರಿಸರ ರಕ್ಷಣೆ ಸಾಧ್ಯ ಎಂದರು. ಇದೇ ವೇಳೆ ಕೃಷಿ ಮಹಿಳೆಯರಾದ ಭುವನೇಶ್ವರಿ ಕಾಂಬಳೆ ಮತ್ತು ಭಾರತಿ ಮೆಂಡೆದಾರ ಇವರನ್ನು ಸನ್ಮಾನಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ, ಸನ್ಮಾನಿತ ಭುವನೇಶ್ವರಿ ಕಾಂಬಳೆ, ಭಾರತಿ ಮೆಂಡೆದಾರ, ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಕಾಶ , ಡಾ. ಪ್ರೇಮಚಂದ್ರ, ಡಾ. ಪ್ರಸಾದ ಮಾತನಾಡಿದರು.
ನಂತರ ಸುಮಾರು ೫೦ ಕ್ಕೂ ಹೆಚ್ಚು ರೈತರು ಚರ್ಚೆಯಲ್ಲಿ ಭಾಗವಹಿಸಿದ್ದರು. ಮತ್ತು ಅವರಿಗೆ ವಿಡಿಯೋ ಮೂಲಕ ಸಾವಯುವ ಕೃಷಿ ಕುರಿತು ಮಾರ್ಗದರ್ಶನ ನೀಡಲಾಯಿತು.
ಇಂಡಿಯ ಕೃಷಿಯ ವಿಜ್ಞಾನ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭುವನೇಶ್ವರಿ ಕಾಂಬಳೆ ಭಾರತಿ ಮೆಂಡೆದಾರ ಇವರನ್ನು ಸನ್ಮಾನಿಸಿ ಚಂದ್ರಕಾAತ ಪವಾರ ಮಾತನಾಡಿದರು.




















