ಇಂಡಿ | ಲೋಕ ಅದಾಲತ್ : 8 ಕೋಟಿ ವಸೂಲಾತಿ : 2496 ಪ್ರಕರಣ ಇತ್ಯರ್ಥ
ಇಂಡಿ : ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ೮ ಕೋಟಿ ರೂ ವಸೂಲಾತಿಯಾಗಿದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವಸೂಲಾತಿಯಾಗಿದೆ ಎಂದು ಹಿರಿಯ ಶ್ರೇಣ ಯ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರಾಷ್ಟಿçÃಯ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು ಲೋಕ ಅದಾಲತ್‌ನಲ್ಲಿ ೩೩೨೮ ಪ್ರಕರಣಗಳಲ್ಲಿ ೨೪೯೬ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೧೯೯೧ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಕಾಂಬಳೆ ತಿಳಿಸಿದರು.
ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಕಾಂಬಳೆ ತಿಳಿಸಿದರು.
ದಿವಾನಿ ನ್ಯಾಯಾಧೀಶ ಸುನೀಲಕುಮಾರ , ವಕೀಲರ ಸಂಘದ ಕಾರ್ಯದರ್ಶಿ ಎನ್.ಕೆ.ನಾಡಪುರೋಹಿತ, ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಸುನೀಲ ಕುಲಕಣ ð, ಶ್ರೇಣ ಕರಾಜ ಪಾಟೀಲ, ಬಿ.ಸಿ.ತಾಂಬೆ, ಬಿ.ಬಿ.ಕೊಟ್ಟಲಗಿ, ಅನೀಲ ಜೋಶಿ,ಎಸ್.ಕೆ.ತಮಶೆಟ್ಟಿ, ವಿ.ಎಸ್.ಹಿರೇಮಠ, ವಿ.ಜಿ.ನಾಯಕ , ಸಹಾಯಕ ಸರಕಾರಿ ಅಭಿಯೋಜಕ ಗಚ್ಚಿನ ಮಹಲ, ಮಲ್ಲೆಶಿ ಎಂಬತನಾಳ, ಶ್ರೀಮತಿ ರಾಖಿ ಕಟ್ಟಿಮನಿ,ಬಾಪುರಾಯ ಕೋಳುರ, ವಾಯ್.ಎಸ್.ಪೂಜಾರಿ, ಬಿ.ಎಂ.ಲಿಂಗಸೂರ, ಎಂ.ಬಿ.ಅಂಬಲಗಿ, ಪ್ರವೀಣ ಕಾಂಬಳೆ, ಮತ್ತು ಸಿದ್ದು ಹಾವಳಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತನಲ್ಲಿ ಹಿರಿಯ ಶ್ರೇಣ ಯ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಪಕ್ಷಿದಾರರು ಮತ್ತು ನ್ಯಾಯವಾದಿಗಳು ಪಾಲ್ಗೊಂಡಿರುವದು.
ಇಂಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತನಲ್ಲಿ ದಿವಾನಿ ನ್ಯಾಯಾಧೀಶ ಸುನೀಲಕುಮಾರ ಪಕ್ಷಿದಾರರು ಮತ್ತು ನ್ಯಾಯವಾದಿಗಳು ಪಾಲ್ಗೊಂಡಿರುವದು.