ಇಂಡಿ: ಕಳೆದ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಮೇ 05 ರಂದು ಇಂಡಿ ಬಂದ ಕರೆ ನೀಡಿದ ಪ್ರಯುಕ್ತ ಇಂಡಿ ಶಾಖಾ ಕಾಲುವೆಗೆ ನೀರು ಹರಿಬಿಟ್ಟಿದ್ದಾರೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಸಾಲೋಟಗಿ ಗ್ರಾಮದ ಹತ್ತಿರ ಇರುವ ಇಂಡಿ ಶಾಖಾ ಕಾಲುವೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಮಾತನಾಡಿದರು. ಬೇಸಿಗೆಯಲ್ಲಿ ನಮ್ಮ ರೈತರಿಗೆ ನೀರು ಕೊಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ನಷ್ಟ ಆದ ತೊಗರಿಗೆ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಯಿಂದ ಪರಿಹಾರ ನೀಡಬೇಕು ತೊಗರಿ ವಿಷಯ ಸರ್ಕಾರದ ಹಂತದಲ್ಲಿದೆ ಎಂದು ಈಗ ನಮ್ಮ ಹೋರಾಟದ ಫಲವಾಗಿ ಮತ್ತು ರೈತರಿಗೋಸ್ಕರ,ಸರ್ಕಾರ ಕಾಲುವೆಗೆ ನೀರು ಹರಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಲೋಟಗಿ ಹತ್ತಿರ ಕಾಲುವೆ ನೀರು ಬಂದಾಗ ಎಲ್ಲಾ ರೈತರು ಹಾಗೂ ಕರವೇ ಮುಖಂಡರು ಕೂಡಿಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಸರಕಾರಕ್ಕೂ, ಜನ ಪ್ರತಿನಿಧಿಗಳು ಬೆಂಬಲಿಸಿದ ರೈತರಿಗೂ, ಅಧಿಕಾರಿಗಳಿಗೂ, ವಿವಿಧ ಸಂಘಟನೆಗಳ ಮುಖಂಡರಿಗೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲಿಸಿದ ಎಲ್ಲರಿಗೂ ಮುಳಜಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಹೇಶ ಹೂಗಾರ, ಮಂಜು ದೇವರ, ಅಶೋಕ ಅಕಲಾದಿ, ವಿಜಯಕುಮಾರ್ ರಾಥೋಡ, ರಾಘವೇಂದ್ರ ಕಲ್ಯಾಣಿ, ರಂಗನಾಥ್ ಚವ್ಹಾಣ, ರಾಜುಗೌಡ ಪಾಟೀಲ,ಶಿವಾನಂದ ಬೂಳಗೊಂಡ, ಅಕ್ಷಯ್ ಶಿಂದೆ, ಕಲ್ಲು ಮೋಸಲಗಿ, ಪ್ರಶಾಂತ ಲಾಳಸಂಗಿ, ಸಚಿನ ನಾವಿ, ಶಿವಾನಂದ ಮಡಿವಾಳ, ಶಿವಾನಂದ ಚಾಳಿಕಾರ, ಪ್ರೇಮ ರಾಠೋಡ, ಸಾಗರ ಬಿರಾದಾರ, ಚಂದ್ರು ಧರಣವರ, ವಿನೋದ ಪಾಟೀಲ, ಕಿರಣ ತೆಲಗ ಳ, ಆಕಾಶ ಬಿಜಾಪುರ, ರಮೇಶ ಹಜಾರಿ, ಭೀಮ ತಳಕೇರಿ, ಶೇಖರ ಹಿಳ್ಳಿ, ಶೇಟಪ್ಪ ಬಿಜಾಪುರ, ಕರವೇ ಕಾರ್ಯಕರ್ತರು ಹಾಗೂ ರೈತರು ಇದ್ದರು.