ಇಂಡಿ | ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ
ಇಂಡಿ : ನಮ್ಮ ಸೈನ್ಯ ಶಕ್ತಿಯನ್ನು ಎದುರಿಸುವ ಧೈರ್ಯ ಇಲ್ಲದ ಪಾಪಿಗಳು ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ಧಾಳಿಯನ್ನು ಧರ್ಮ ಕೇಳಿ ಮಾಡುತ್ತಾರೆ ಎಂದರೆ ಅವರ ಧರ್ಮಾ0ದತೆಗೆ ಧಿಕ್ಕಾವಿರಲಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಪೋಶಿಸುತ್ತಿರುವ ಉಗ್ರರು ಇದಕ್ಕೆ ತಕ್ಕ ಬೆಲೆ ತೇರಬೇಕಾಗುತ್ತದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹಾಗೂ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕಿಡಿಕಾರಿದರು.
ಪಟ್ಟಣದ ಬಸವೇಶ್ವರ ವೃತ್ ದಲ್ಲಿ ಬಿಜೆಪಿ ಮಂಡಳವತಿ ಹಮ್ಮಿಕೊಂಡಿದ್ದ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿಯನ್ನು ಖಂಡಿಸಿ ಹಾಗೂ ಉಗ್ರರ ದಾಳಿಗೆ ಬಲಿಯಾದವರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಇನ್ನೂ ಬಿಜೆಪಿ ಮುಖಂಡ ಅನೀಲ ಜಮಾದಾರ, ಶೀಲವಂತ ಉಮರಾಣಿ, ಹಣಮಂತರಾಯಗೌಡ ಪಾಟೀಲ ಮಾತನಾಡಿದ ಅವರು, ಈ ರೀತಿ ಧರ್ಮ ಕೇಳಿ ಕೊಲ್ಲುವ ಕೃತ್ಯ ಮಾಡಿದವರ ವಿರುದ್ಧ ಈಗಲಾದರೂ ಈ ದೇಶದ ಜನ ಧರ್ಮ, ಜಾತಿ, ಪಕ್ಷ ಮೀರಿ ಪ್ರತಿಭಟಿಸುವ ಕೆಲಸ ಮಾಡಬೇಕಿದೆ ,ಕೇಂದ್ರದ ನರೇಂದ್ರ ಮೋದಿ ಸರ್ಕಾರ ಉಗ್ರರ ಈ ಕೃತ್ಯಕ್ಕೆ ಅವರದೇ ಭಾಷೆಯಲ್ಲಿ ತಕ್ಕ ಉತ್ತರ ಕೊಟ್ಟೇ ಕೊಡುತ್ತದೆ ಎಂದಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ ಬದುಕಿದವರ ಮುಂದೆ ನಿಮ್ಮ ಮೋದಿಗೆ ಹೋಗಿ ಹೇಳಿ ಎಂದು ಕಳಿಸಿದ್ದೀರಿ, ಉಗ್ರಗಾಮಿಗಳೇ ನಿಮ್ಮ ಹುಟ್ಟಡಗಿಸುವ ಕಾರ್ಯಕ್ಕೆ ನೀವೇ ಚಾಲನೆ ಕೊಟ್ಟಿದ್ದೀರಿ ಕಾದು ನೋಡಿ ಎಂದರು.
ಬಿಜೆಪಿ ಜಿಲ್ಲಾ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿಯೇ ಬುದ್ದಿ ಕಲಿಸಬೇಕು. ಘಟನೆಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಮಂದಿ ಮೃತಪಟ್ಟಿದ್ದು ನೋವು ತಂದಿದೆ ಎಂದರು.ಪಾಕಿಸ್ತಾನ ಮೂಲದ ಉಗ್ರರು ನಡೆಸಿರುವ ಹೇಯ ಕೃತ್ಯ ಖಂಡನೀಯ. ಇದು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನ ಇದನ್ನು
ಪ್ರತಿಯೊಬ್ಬ ನಾಗರಿಕರು ಖಂಡಿಸಲೇಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಜಗದೀಶ್ ಕ್ಷತ್ರಿ, ಶರಣಗೌಡ ಬಂಡಿ, ವೆಂಕಟೇಶ ಕುಲಕರ್ಣಿ, ರಾಮಸಿಂಗ್ ಕನ್ನೊಳ್ಳಿ, ಸೋಮು ನಿಂಬರಗಿಮಠ, ರಾಜು ಬಡಿಗೇರ, ಶ್ರೀಧರ ಕ್ಷತ್ರಿ, ಪ್ರಕಾಶ ಬಿರಾದಾರ, ದೇವೆಂದ್ರ ಕುಂಬಾರ, ವಿಜು ಮಾನೆ, ಸಂಜು ದಶವಂತ, ವಿಜಯಲಕ್ಷ್ಮಿ ರೂಗಿಮಠ, ಸಂಗೀತ ಬಗಲಿ, ದತ್ತಾ ಬಂಡೆನವರ, ಮಲ್ಲು ವಾಲಿಕಾರ, ಮಹೇಶ ಹೂಗಾರ, ಮಂಜು ದೇವರ, ಸುನೀಲಗೌಡ ಬಿರಾದಾರ, ಅನೀಲಗೌಡ ಬಿರಾದಾರ,ಮಲ್ಲು ಗುಡ್ಡ,ಸುನಂದ ಗಿರಣಿವಡ್ಡರ ಇತರರು ಇದ್ದರು.



















