ಇಂಡಿ : ಶಾಸಕ ಯಶವಂತರಾಯಗೌಡ ಪಾಟೀಲಗೆ ಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡ ಹಾಗೂ ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟಿಕಾರ್ ಹೇಳಿದರು. ಇಂಡಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಧರ್ಮಗುರುಗಳಿಗೆ ಶಾಸಕ ಪಾಟೀಲ ಗೌರವ ನೀಡಿಲ್ಲ. ಇಂತಹ ಶಾಸಕರಿಗೆ ನಮ್ಮ ಸಮಾಜದವರು ಉತ್ತರ ನೀಡಬೇಕು ಎಂದು ಕೈ ಮುಗಿದು ಕೇಳಿಕೊಂಡರು. ಅಲ್ಲದೇ, ಜಾತಿ ಧರ್ಮದಲ್ಲಿ ಶಾಸಕ ಯಶವಂತರಾಯಗೌಡ ರಾಜಕೀಯ ಮಾಡುತ್ತಿದ್ದು ಖಂಡನೀಯ. ಅಲ್ಲದೇ, ನಿಮ್ಮ ಸಮಾಜದ ಗುರುಗಳು ಬಂದ್ರೇ ಗೌರವ ನೀಡುತ್ತಾರೆ. ಆದ್ರೇ, ನಮ್ಮ ಅಲ್ಪಸಂಖ್ಯಾತರ ಗುರುಗಳಿಗೆ ಗೌರವ ಇಲ್ಲ ಎಂದು ಕಿಡಿಕಾರಿದರು. ನಮ್ಮಿಂದ ಶಾಸಕರಾಗಿದ್ದನ್ನು ಮರೆಯಬೇಡಿ. ನಿಮ್ಮಿಂದ ನಾವು ಅಲ್ಲ. ನಮ್ಮಿಂದ ನೀವು ಎಂದು ವಾಗ್ದಾಳಿ ಮಾಡಿದರು.