ಇಂಡಿ : ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವದ ನಿಮಿತ್ತ ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಖಂಡಿಸಿ ವಿವಿಧ ಸಮಾಜದ ಮುಖಂಡರು ಆಕ್ರೋಶಗೊಂಡು ಸಭೆ ಬಹಿಷ್ಕರಿಸಿದರು.
ಮಧ್ಯಾಹ್ನ 3:30 ಕ್ಕೆ ನಿಗದಿ ಯಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿರುವ ತಹಶಿಲ್ದಾರ ಬಿ ಎಸ್ ಕಡಕಭಾವಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ್ ಲಮಾಣಿ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಸೇರಿದಂತೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ವಿನಾಯಕ ಗುಣಸಾಗರ, ಸುರೇಶ ನಡಗಡ್ಡಿ, ದತ್ತಾ ಬಂಡೆನವರ, ಚಂದ್ರಶೇಖರ ಹೊಸಮನಿ, ಧರ್ಮರಾಯ ಸಾಲೋಟಗಿ, ಬಾಬು ಗುಡಮಿ, ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವುದು ಖಂಡನೀಯ. ಸರ್ಕಾರದ ಮಟ್ಟದಲ್ಲಿ ಆಚರಿಸುವ ಶರಣರು, ಮಹಾತ್ಮರ ಜಯಂತಿಗಳಿಗೆ ಅಸಡ್ಡೆ ತೋರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ವಿವಿಧ ಸಮಾಜಗಳ ಮುಖಂಡರು ಒತ್ತಾಯಿಸಿದರು.
ಇನ್ನೂ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ತಹಶಿಲ್ದಾರ ಬಿಎಸ್ ಕಡಕಭಾವಿ ಅಧಿಕಾರಿಗಳ ವಿರುದ್ಧ ಗರಂ ಆಗಿ ಮಾತನಾಡಿದರು. ಈ ಹಿಂದೆ ಶರಣ ಸಂತರು, ರಾಷ್ಟ್ರೀಯ ನಾಯಕರ ಜಯಂತಿ ನಿಮತ್ಯ ಹಮ್ಮಿಕೊಂಡ ಹಲವಾರು ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಗೈರು ಹಾಜರಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಸುಮಾರು 2 ವರ್ಷಗಳಿಂ ಕೆಲವು ತಾಲ್ಲೂಕು ಮಟ್ಟದ ಅಧಿಕಾರಿಗಳ ಮುಖವನ್ನೆ ಕಂಡಿಲ್ಲ. ಹಾಗಾದರೆ ಹೇಗೆ..? ಇಂತಹ ಕಹಿ ಘಟನೆಗಳು ಪುನಃ ಪುನಃ ನಡೆಯಬಾರದೆಂದು ಸೂಕ್ಷ್ಮವಾಗಿ ಹೇಳಲಾಗಿದೆ ಎಂದು ಹೇಳಿದರು. ವಿವಿಧ ಸಮಾಜದ ಮುಖಂಡರು ಸಂಘಟನೆಯ ಮುಖಂಡರು , ಪದಾಧಿಕಾರಿಗಳು ಸಭೆಯಿಂದ ಹೊರ ನಡೆದಿದ್ದರಿಂದ ಮತ್ತೊಮ್ಮೆ ಸಭೆ ದಿನಾಂಕ ನಿಗದಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ ಕಾಳೆ, ಸಂತೋಷ ಮ್ಯಾಗೇರಿ, ಪರಶುರಾಮ ಭಾವಿಕಟ್ಟಿ, ವಿಶ್ವನಾಥ ವಾಗಮೋರೆ, ರಾಜಶೇಖರ ಶಿರಗೂರ, ಸುರೇಶ ಕಾಂಬಳೆ, ಮೀರಾಸಾಬ ವಾಗಮೋರೆ, ರೇವಣ್ಣ ಹತ್ತಳ್ಳಿ, ಶ್ರೀಧರ ನಾಟೀಕಾರ, ಸಿದ್ದರಾಮ ನಾಟಿಕಾರ, ಲಕ್ಷ್ಮಣ ತಳವಾರ ಇನ್ನೂ ಅನೇಕರು ಸೇರಿದಂತೆ ಉಪಸ್ಥಿತರಿದ್ದರು.