ಇಂಡಿ | ತಾಲೂಕು ಆಡಳಿತ ಸೌಧದಲ್ಲಿ ಮಹನೀಯರ ಜಯಂತಿ ಪೂರ್ವಭಾವಿ ಸಭೆ ಇಂದು
ಇಂಡಿ: ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ 118ನೇ ಹಾಗೂ ಸಂವಿಧಾನ ಶಿಲ್ಪಿಡಾ.ಬಿ.ರ್ಆ.ಅಂಬೇಡ್ಕರ್ 134ನೇ ಜಯಂತಿ ಆಚರಣೆ ಪೂರ್ವಭಾವಿ ಸಭೆ ಮಾ.26ರಂದು ಮಧ್ಯಾಹ್ನ 3.30ಕ್ಕೆ ತಾಲೂಕು ಆಡಳಿತಸೌಧ ಸಭಾಭವನಲ್ಲಿ ಕರೆಯಲಾಗಿದೆ.
ತಹಸೀಲ್ದಾರ್ ಬಿ.ಎಸ್.ಕಡಕಬವಾವಿ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತದಿಂದ ಆಚರಣೆ ಮಾಡಲು ಸಂಘ, ಸಂಸ್ಥೆಗಳ ಮುಖಂಡರು, ಗಣ್ಯರು, ತಾಲೂಕುಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಕೋರಿದ್ದಾರೆ.



















