ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ
ಇಂಡಿ : ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗೆ ಮೊದಲ ಪ್ರಾಶಸ್ತö್ಯ ನೀಡಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಕೆರೆಗಳನ್ನು ತುಂಬಿಸುವದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ಎಲ್ಲ ಕೆರೆ ಹಳ್ಳಗಳನ್ನು ಪೂರ್ತಿ ತುಂಬಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಹೇಳಿದರು.
ಸಾಲೋಟಗಿ ಗ್ರಾಮದ ಕೃಷ್ಣಾ ನೀರಾವರಿ ಇಲಾಖೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಕಾಲುವೆ ಮೂಲಕ ನೀರು ಹೋಗದಿರುವ ಗ್ರಾಮಗಳ ವ್ಯಾಪ್ತಿಯ ಹಳ್ಳಗಳಿಗೆ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಹಳ್ಳ ಕೊಳ್ಳ ಬಾಂದಾರುಗಳನ್ನು ತುಂಬಿದೆ ಎಂದರು.
ತಾಲೂಕಿನ ಬಳಗಾನೂರ ಕೆರೆ, ಸಂಗೋಗಿ ಕೆರೆ, ತುಂಬಿ ನಾದ ದೊಡ್ಡ ಹಳ್ಳ, ಮಾರ್ಸನಳ್ಳಿ ಬಳಿಯ ಹಳ್ಳ, ಹತ್ತಳ್ಳಿ ಹಾವಿನಾಳ ಅಗರಖೇಡ, ಹಿರೇಬೇವನೂರ, ಚಿಕ್ಕಬೇವನೂರ,ಮಿರಗಿ, ಗೋಳಸಾರ, ಹಲಸಂಗಿ, ಹಳ್ಳ ಸೇರಿದಂತೆ ಹಲವು ಕಾಲುವೆಗಳ ಮೂಲಕ ಭೀಮಾನದಿಗೆ ಸೇರಿದೆ . ಇದರಿಂದ ತಾಲೂಕಿನ ಜನರಿಗೆ ಕುಡಿಯುವ ನೀರಿನ ಜೊತೆಗೆ ಜನ ಜಾನುವಾರುಗಳಿಗೆ ನೀರಿನ ತೊಂದರೆ ಆಗುವದಿಲ್ಲ ಎಂದರು.
ಇಂಡಿ ತಾಲೂಕಿನ ಹಿರೇಬೆವನೂರ ಹಳ್ಳ ತುಂಬಿ ಹರಿಯುತ್ತಿರುವದು.