ಇಂಡಿ | ಮೊದಲ ಮಹಿಳಾ ಎಸಿಯಾಗಿ ಅನುರಾಧಾ ವಸ್ತ್ರದ
ಇಂಡಿ : ಉಪ ವಿಭಾಗದ ನೂತನ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಅಧಿಕಾರದಲ್ಲಿದ್ದ ವಿನಯ ಪಾಟೀಲ ವಸ್ತçದ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇಂಡಿಯ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿ ಪ್ರಾರಂಭವಾದಾಗಿನಿಂದ ಮಹಿಳಾ ಆದಿಕಾರಿಯಾಗಿ ಅಧಿಕಾರಿ ವಹಿಸಿಕೊಂಡ ಪ್ರಥಮ ಮಹಿಳೆ. ಅನುರಾಧಾರವರು ಪ್ರಾಥಮಿಕ,ಪ್ರೌಢ ಶಿಕ್ಷಣ ವಿಜಯಪುರದಲ್ಲಿ ಮತ್ತು ಇಂಜಿನಿಯರಿಂಗ್ ಬಿ.ಎಲ್.ಡಿ ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತ್ತಿದ್ದಾರೆ. ಹುಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ಭೂ ಸ್ವಾದೀನ ಅಧಿಕಾರಿ ಈ ಮೊದಲು ಅಧಿಕಾರದಲ್ಲಿದ್ದರು. ಅವರು ಕರ್ನಾಟಕ ಕಾನೂನು ವಿ ವಿ ಕುಲಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಅನುರಾಧಾ ವಸ್ತçದ ಅಧಿಕಾರ ವಹಿಸಿಕೊಂಡರು




















