ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ
೧೭ ರಂದು ವಿಜಯೇಂದ್ರ ನೇತೃತ್ವದ ಜನಾಕ್ರೋಶ ಸಭೆಗೆ ಪಾಲ್ಗೊಳ್ಳಿ
ಇಂಡಿ | ಏ – 17 ರಂದು ವಿಜಯಪುರ ನಗರದಲ್ಲಿ ಜನಾಕ್ರೋಶ ಸಭೆಗೆ ಪಾಲ್ಗೊಳ್ಳಲು ಕರೆ : ವಿವೇಕ ಡಬ್ಬಿ
ಇಂಡಿ : ಕಾಂಗ್ರೆಸ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.೧೭ ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು ಇಂಡಿ ತಾಲೂಕಿನ ಪ್ರತಿ ಬೂತ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಹೇಳಿದರು.
ಪಟ್ಟಣಧ ಶ್ರೀ ಸತ್ಯ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದ ಜನಾಕ್ರೋಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮಹಿಳೆಯರಿಗೆ ಉಚಿತ ಬಸ್ಸ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಸಾಮಾಜಿಕ ಇಲಾಖೆಯ ೨೮ ಸಾವಿರ ಕೋಟಿ ಅನುದಾನದಲ್ಲಿ ೧೮ ಸಾವಿರ ಕೋಟಿ ರೂ ಗ್ಯಾರಂಟಿಗೆ ನೀಡಿದ್ದಾರೆ. ಇವೆಲ್ಲವನ್ನು ಪರಿಗಣ ಸಿ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಸಭೆ ವಿಜಯಪುರದಲ್ಲಿ ನಡೆಯುತ್ತಿದೆ ಎಂದರು.
ಇಂಡಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ಇಂಡಿಯಿAದ ಹೆಚ್ಚು ಕಾರ್ಯಕರ್ತರು ಜನಾಕ್ರೋಶ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ ಮಟ್ಟದಲ್ಲಿ ಕಾರ್ಯಕರ್ತರನ್ನು ತರಬೇಕು ಎಂದರು.ಈಗಾಗಲೇ ಮೈಸೂರು, ಶಿವಮೊಗಾ ದಲ್ಲಿ ಯಶಸ್ವಿಯಾಗಿದ್ದು ವಿಜಯಪುರ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಳಿಕೊಂಡರು.
ಮುಳುಗೌಡ ಪಾಟೀಲ ,ಕಾಸುಗೌಡ ಬಿರಾದಾರ,ಶಂಕರಗೌಡ ಪಾಟೀಲ, ದೇವೆಂದ್ರ ಕುಂಬಾರ ಮಾತನಾಡಿ ಕಾಂಗ್ರೆಸ ಸರಕಾರ ಎಲ್ಲ ಬೆಳವಣೆಗೆಗಳಿಗೂ ಕೇಂದ್ರದ ಕಡೆಗೆ ಬೊಟ್ಟು ಮಾಡುವದನ್ನು ಬಿಟ್ಟು ಅಭಿವೃದ್ದಿ ಕಡೆಗೆ ಗಮನ ನೀಡಬೇಕು.
ರಸ್ತೆಗಳು ಹದೆಗೆಟ್ಟಿವೆ. ಮತಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲ್ಲ. ಹೀಗಾಗಿ ಜನತೆ ಹತಾಸೆಗೊಂಡಿದ್ದಾರೆ. ಕಾರಣ ವಿಜಯೇಂದ್ರ ಶಕ್ತಿ ಬಲಪಡಿಸಲು ಹೆಚ್ಚಿನ ಕಾರ್ಯಕರ್ತರು ಜನಾಕ್ರೋಶ ಸಭೆಗೆ ಬರಲು ಕೇಳಿಕೊಂಡರು.
ಸಭೆಯಲ್ಲಿ ಶಂಕರಗೌಡ ಪಾಟೀಲ,ಶೀವಂತ ಉಮರಾಣ ,ಅನೀಲ ಜಮಾದಾರ, ಸಿದಲಿಂಗ ಹಂಜಗಿ,ಹಣಮAತಗೌಡ ಪಾಟೀಲ,ವಿಜಯಲಕ್ಷಿö್ಮÃ ರೂಗಿಮಠ,ರಾಘವೇಂದ್ರ ಕಾಪಸೆ, ಬಾಳು ಮುಳಜಿ, ಮಹೇಂದ್ರ ಹೂಗಾರ,ರಾಮಸಿಂಗ ಕನ್ನೊಳ್ಳಿ ಮತ್ತಿತರಿದ್ದರು.
ಇಂಡಿಯಲ್ಲಿ ನಡೆದ ಬಿಜೆಪಿ ಪಕ್ಷದ ಪೂರ್ವಭಾವಿ ಸಭೆಯಲ್ಲಿ ವಿವೇಕ ಡಬ್ಬಿ ಮಾತನಾಡಿದರು.




















