ರಾಯಚೂರು : ಮೂರು ವರ್ಷದಲ್ಲಿ ದಿನಕ್ಕೊಂದು ಹಗರಣದಲ್ಲಿ ಬಿಜೆಪಿ ಸರ್ಕಾರ ಕಾಣಸಿಗುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರ ಪ್ರತಿ ಕಾಮಗಾರಿಯಲ್ಲೂ ಗುತ್ತಿಗೆದಾರರಿಂದ ಶೆ.40 ಪರ್ಸೆಂಟ್ ತೆಗೆದುಕೊಳ್ಳುವ ಮೂಲಕ ಭಂಡ, ಭ್ರಷ್ಟ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗಂಭೀರವಾಗಿ ಆರೋಪಿಸಿದರು.
ಇಂದು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಭ್ರಷ್ಟಾಚಾರ ಕಾವಲುಗಾರ ಭ್ರಷ್ಟಾಚಾರವನ್ನು ತಾನು ಮಾಡುವುದಿಲ್ಲ ಬೇರೆಯವರಿಗೂ ಮಾಡಲು ಬಿಡುವುದಿಲ್ಲ ಈ ದೇಶದ ಚೌಕಿದಾರ ನಿಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣ ಮಾಡಿಕೊಂಡಿದ್ದು ಮೂರುವರ್ಷದಲ್ಲಿ ದಿನಕ್ಕೊಂದು ಹಗರಣದಲ್ಲಿ ಬಿಜೆಪಿ ಸರ್ಕಾರ ಕಾಣಸಿಗುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರ ಪ್ರತಿ ಕಾಮಗಾರಿಯಲ್ಲೂ ಗುತ್ತಿಗೆದಾರರಿಂದ ಶೆ.40 ಪರ್ಸೆಂಟ್ ತೆಗೆದುಕೊಳ್ಳುವ ಮೂಲಕ ಭಂಡ, ಭ್ರಷ್ಟ ಸರ್ಕಾರವಾಗಿ ಮಾರ್ಪಟ್ಟಿದೆ ಇತ್ತೀಚೆಗೆ ಕೆ.ಎಸ್ ಈಶ್ವರಪ್ಪ ಅವರು ಸಂತೋಷ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಯ ಬಿಲ್ ಪಾವತಿ ಮಾಡಲು ಶೆ.40ರಷ್ಟು ಹಣದ ಬೇಡಿಕೆ ಇಟ್ಟಿದ್ದಾರೆಂದು ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ವಿರೋಧಿಸಿ ಇಂದು ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಾ 2021ರ ಪ್ರಧಾನಿ ಹಾಗೂ ಪಂಚಾಯತ್ ರಾಜಕೀಯ ಇಂದ್ರ ಸಚಿವರಿಗೆ ಸಂತೋಷ್ ಗುತ್ತಿಗೆದಾರರು ಈಶ್ವರಪ್ಪ ಅವರ ವಿರುದ್ಧ ದೂರು ನೀಡಿದ್ದು ಆದರೆ ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂತೋಷ್ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಕಾಯ್ದೆಯಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಲು ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಗುಡುಗಿದರು. ಇತಿಹಾಸದಲ್ಲಿ ಇಂತಹ ಕೆಟ್ಟ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಹಾಗೂ ಆಡಳಿತ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿರುವ ಸರ್ಕಾರವನ್ನು ಎಂದು ಕಂಡಿಲ್ಲ, ಪಂಚಾಯತ್ ರಾಜ್ ಇಲಾಖೆ ಅಲ್ಲದೆ ಮಠಗಳ ಕಾಮಗಾರಿಗಳ ಮಂಜೂರಾತಿ ಅನುದಾನ ಪಾವತಿಯಾಗಿದ್ದರು ಶೆ.30 ಪರ್ಸೆಂಟ್ ಬೇಡಿಕೆ ಇಡುತ್ತಿರುವ ರಾಜ್ಯ ಸರ್ಕಾರದ ನಡೆ ನಾಚಿಕೆಗೇಡಿನ ಸಂಗತಿಯಾಗಿದೆ.
ಆತ್ಮ ನಿರ್ಭರ ಭಾರತ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದು ಆದರೆ ಇದು ಆತ್ಮ ನಿರ್ಭರ ಭಾರತವಲ್ಲ ಆತ್ಮ ದುರ್ಬರವಾಗಿದೆ ಎಂದರು. ಕಾಮಗಾರಿಯಲ್ಲಿ ಪರ್ಸೆಂಟೇಜ್ ಬೇಡಿಕೆ ಇಡುತ್ತಿರುವ ಸಚಿವರ ತನಿಖೆಯಾದರೆ ಬಿಜೆಪಿ ಸರ್ಕಾರದಲ್ಲಿ ಶೆ.90% ರಷ್ಟು ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಆದ್ದರಿಂದ ಕೂಡಲೇ ಈಶ್ವರಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬಂದಿದೆ ಹಾಗೂ ಸಾವನ್ನಪ್ಪಿದ ಸಂತೋಷ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಬೇಕು ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲು ಬಿಜೆಪಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.