ಸ್ಪರ್ಧಾತ್ಮಕ ಪದವಿಯುಗದಲ್ಲಿ ಕೇವಲ ಶಿಕ್ಷಣದಿಂದ ಸರಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಿಲ್ಲ..!
ವರದಿ : ಬಸವರಾಜ ಕುಂಬಾರ ,ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ; ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಶಿಕ್ಷಣದಿಂದ ಸರಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಿಲ್ಲ ಹೀಗಾಗಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದೂಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನುರಿತ ಕೆಎಎಸ್ ಐಎಎಸ್ ತರಬೇತುದಾರರಿಂದ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಎರಡು ದಿನದ ಉಚಿತ ಕಾರ್ಯಾಗಾರವನ್ನು ಅಭ್ಯುದಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭ್ಯುದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ ಹೇಳಿದರು ಮಂಗಳವಾರ ಹೂಳ್ಕರ ಬಡಾವಣೆಯ ಅಭ್ಯುದಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜೂ 19 ಹಾಗೂ20 ಎರಡು ದಿನಗಳ ಸಂಯೋಜಿತ ಪದವಿಗಳ ಕುರಿತು ಕಾರ್ಯಾಗಾರವನ್ನು ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಹೆಚ್ ಬಿ ವಾಲಿಕಾರ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿಬೇಕು ಎಂದು ಮನವಿ ಮಾಡಿಕೊಂಡರು ಎರಡು ದಿನದ ಕಾರ್ಯಗಾರ ಬೆಳಗ್ಗೆ 10:30 ರಿಂದ ಸಂಜೆ 5:30 ವರಗೆ ನಡೆಯಲಿವೆ
ನಮ್ಮ ಭಾಗದ ವಿದ್ಯಾರ್ಥಿಗಳು ಧಾರವಾಡ ಬೆಂಗಳೂರುಗೆ ಹೋಗಿ ತರಬೇತಿಯನ್ನು ಪಡೆಯಲು ಕಷ್ಟಸಾಧ್ಯ ಹೀಗಾಗಿ ಈ ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಪದವಿ ವ್ಯಾಸಂಗದ ಜೊತೆಗೆ ಆನ್ಲೈನ್ ಸ್ಮಾರ್ಟ್ ಕ್ಲಾಸ್ ಗಳ ಮೂಲಕ ಪ್ರತಿನಿತ್ಯ ನಿಗದಿತ ಸಮಯದಲ್ಲಿ ಕ್ಲಾಸ್ ಗಳು ನುರಿತ ಶಿಕ್ಷಣ ತಜ್ಞರು ಹೇಳುತ್ತಾರೆ
ವಿಶೇಷ ತರಬೇತಿ; ರಾಜ್ಯ ಮತ್ತು ಕೇಂದ್ರ ಸರಕಾರದ ಹುದ್ದೆಗಳಾದ ಕೆಎಎಸ್ ,ಐಎಎಸ್,ಎಸ್ ಡಿಎ ,ಎಫ್ ಡಿ ಎ, ಪೂಲೀಸ್, ಪಿಎಸ್ಐ, ಬ್ಯಾಕಿಂಗ್, ಆರ್ ಆರ್ ಬಿ, ಎಸ್ಎಸ್ಸಿ ,ಐಐಟಿ ಜಾಮ್ ಸೇರಿದಂತೆ ಇತರೆ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ
ಪತ್ರಿಕಾಗೋಷ್ಠಿಯಲ್ಲಿ ಲೆಕ್ಕ ವ್ಯವಸ್ಥಾಪಕ ಬಸವರಾಜ ಬಿಜ್ಜೂರ, ಆಡಳಿತ ಅಧಿಕಾರಿ ಬಿ ಜಿ ಬಿರಾದಾರ, ಪ್ರಾಂಶುಪಾಲ ಆರ್ ಎಸ್ ಜಡಗಿ, ಎಂ ಎಂ ಧನ್ನೂರ, ಪ್ರಶಾಂತ ಬಿರಾದಾರ, ಎಸ್ ರಂಗಸ್ವಾಮಿ, ವಿರೇಶ ಹೂಲಿಕೇರಿ, ರವಿ ಚಲವಾದಿ, ಬಸವರಾಜ ಗೂಡಲಮನಿ ಭಾಗವಹಿಸಿದ್ದರು.
ನಮ್ಮ ಸೈನ್ಸ್ ಪಿಯು ಕಾಲೇಜಿನಲ್ಲಿ ಎರಡು ವರ್ಷ ಉಚಿತ ಶಿಕ್ಷಣ ಪಡೆದ ವಿದ್ಯಾರ್ಥಿನಿ ಮಹಾದೇವಿ ಢವಳಗಿ ನೀಟ್ ನಲ್ಲಿ 617 ನೇ ರ‌್ಯಾಂಕ್ ಪಡೆಯುವ ಮೂಲಕ ಎಂಬಿಬಿಎಸ್ ಗೆ ಆಯ್ಕೆಯಾಗಿ ಸಂಸ್ಥೆಗೆ ಹೆಮ್ಮೆ ಸಂಗತಿಯಾಗಿದೆ ; ಮಲ್ಲಿಕಾರ್ಜುನ ಮದರಿ ಅಭ್ಯುದಯ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳು



















