ಚಡಚಣ : ಅಕ್ರಮವಾಗಿ ಮದ್ಯ ಮಾರಾಟ ಮಾಡುವ ವೇಳೆ ಪೊಲೀಸರು ದಾಳಿಗೈದು ಲಕ್ಷಾಂತರ ಮೌಲ್ಯದ ಮದ್ಯ ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಜ್ ಗ್ರಾಮದಲ್ಲಿ ಬುಧವಾರ ನಡೆದಿದೆ. 28 ವರ್ಷದ ಅನೀಸ್ ಇಕ್ಬಾಲ್ ವಳಸಂಗ ಬಂಧಿತ ಆರೋಪಿ. ಇನ್ನೂ ಬಂಧಿತ ಆರೋಪಿಯಿಂದ 1.9 ಲಕ್ಷ ಮೌಲ್ಯದ ಅಕ್ರಮ ಮದ್ಯ ಜಪ್ತಿಗೈದಿದ್ದಾರೆ. ಅಲ್ಲದೇ, ಯಾವುದೇ ಲೈಸೆನ್ಸ್ ಇಲ್ಲದೇ ಮದ್ಯ ಸಾಗಾಟ ಮಾಡುವ ವೇಳೆ ಪೊಲೀಸರು ದಾಳಿಗೈದಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.