ಹುಬ್ಬಳ್ಳಿ: ಹನುಮ ಜಯಂತಿಯ ಹಬ್ಬದ ಹಿನ್ನಲೆಯಲ್ಲಿ ಅರ್ಚಕರು ಹನುಮಂತನ ಮೂರ್ತಿ ಸ್ವಚ್ಚಗೊಳಿಸಿ ಪೂಜೆ ನೆರವೇರಿಸುವ ವೇಳೆ ವಿಸ್ಮಯ ಘಟನೆಯೊಂದು ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಹನುಮನ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಮುಂದಾದಾಗ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
ಮೂರ್ತಿ ಸ್ಚಚ್ಛ ಮಾಡುತ್ತಿದ್ದ ವೇಳೆಯಲ್ಲಿ ಹನುಮಂತನ ಕಣ್ಣಿನಿಂದ ಹನಿ ಹನಿ ನೀರು ಬಂದಿದ್ದು ನೆರೆದವರನ್ನು ಚಕಿತಗೊಳಿಸಿದೆ. ಈ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.