ಹನೂರು | ಮಾ. 23 ರಂದು ವಿದ್ಯುತ್ ವ್ಯತ್ಯಯ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ವ್ಯಾಪ್ತಿಯ ರಾಮಾಪುರ ಮತ್ತು ಮಾಟಳ್ಳಿ ಶಾಖಾ ವ್ಯಾಪ್ತಿಯಲ್ಲಿ ಮಾ,23 ರಂದು ತ್ರೈ ಮಾಸಿಕ ಕಾರ್ಯ ನಿರ್ವಹಣೆ ಅಮ್ಮಿಕೊಂಡಿರುವುದರಿಂದ ಆ ದಿನದಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಬಿ.ರಂಗಸ್ವಾಮಿ ರವರು ತಿಳಿಸಿದ್ದಾರೆ.
ರಾಮಾಪುರ ಹಾಗೂ ಮಾಟಳ್ಳಿ66/11ಕೆ ವಿ ವಿದ್ಯುತ್ ಸರಬರಾಜು ವಿತರಣ ಕೇಂದ್ರದಿಂದ ಹೊರಬರುವ ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:00 ಯಿಂದ ಸಂಜೆ 6:00 ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ. ಆದ್ದರಿಂದ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.