ಹಳಗುಣಕಿ ಹನುಮಾನ ಜಾತ್ರಾ ಮಹೋತ್ಸವ
ಇಂಡಿ : ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಶ್ರೀ ಹನುಮಾನ ದೇವರ ಜಾತ್ರೆ ಸಂಭಮದಿಂದ ಜರುಗಿತು. ಮುಂಜಾನೆ ೬ ಗಂಟೆಗೆ ಸಕಲ ಸದ್ಭಕ್ತರಿಂದ ದೀರ್ಘದಂಡ ನಮಸ್ಕಾರ, ಸಾಯಂಕಾಲ ೪ ಗಂಟೆಗೆ ಗೌಡರ ವಾಡೆಯಿಂದ ವಿವಿಧ ವಾದ್ಯ ಮೇಳಗಳೊಂದಿಗೆ ಮೊಸರು ಗಡಿಗೆ ಮೆರವಣೆಗೆ ಸಾಯಂಕಾಲ ೫ ಗಂಟೆಗೆ ಶ್ರೀ ಹನುಮಾನ ದೇವಸ್ಥಾನ ದಲ್ಲಿ ಮೊಸರು ಗಡಿಗೆ ಒಡೆಯುವದು, ಸಾಯಂಕಾಲ ವಿವಿಧ ರೀತಿಯ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ರಾತ್ರಿ ೧೦ ಗಂಟೆಗೆಧರ್ಮದ ದಾರಿಯಲ್ಲಿಕರ್ಮದ ಬಿರುಗಾಳಿ ನಾಟಕ ಪ್ರದರ್ಶನ ವಾಯಿತು. ಸರಸ್ವತಿ ಮತ್ತು ಸತೀಶ ಕುಲಕರ್ಣಿ ಮತ್ತು ಗ್ರಾಮದ ಕಮಿಟಿ ವತಿಯಿಂದ ಇವರಿಂದ ಅನ್ನ ಪ್ರಸಾದ ನಡೆಯಿತು.
ಅರವಿಂದ ಕುಲಕಣ ð, ಸುರೇಶ ಪೂಜಾರಿ, ಅಶೋಕ ಪೂಜಾರಿ, ರವಿ ಪೂಜಾರಿ, ಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಗಿರಿಮಲ್ಲ ಬ್ಯೂಯಾರ, ಅಣ್ಣಾರಾಯ ಪಾಟೀಲ, ಶಂಕರೆಪ್ಪ ಕುಂಬಾರ, ಸಂಗಯ್ಯ ಮಣಕ್ಯಾಳ, ಮಲ್ಲಪ್ಪ ಹೆಗಡ್ಯಾಳ ಮತ್ತಿತರಿದ್ದರು.
ಹಳಗುಣಕಿ ಹನುಮಾನ ದೇವಸ್ಥಾನ




















