ಮಂಗಲ ಗ್ರಾ. ಪಂ.ಗೆ ಧಾರವಾಡದ ರೊಟ್ಟಿಗವಾಡ ಗ್ರಾ. ಪಂ. ಸದಸ್ಯರು ಭೇಟಿ
ಹನೂರು: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲೆ ಕುಂದುಗೊಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮ ಪಂಚಾಯತಿ ಸದಸ್ಯರು ಪಿಡಿಒ ಮತ್ತು ಪಂಚಾಯ್ತಿ ಸಿಬ್ಬಂದಿಗಳು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇಲ್ಲಿನ ಆಡಳಿತ ವೈಖರಿ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದರು.
ಮಂಗಲ ಗ್ರಾಮ ಪಂಚಾಯತಿ ವಿಶೇಷವಾಗಿ ಅಭಿವೃದ್ಧಿ – ಪಡಿಸಲಾಗಿರುವ ಗ್ರಂಥಾಲಯ, ಶಾಲಾಭಿವೃದ್ಧಿ ಮತ್ತು ನರೇಗಾ ಯೋಜನೆ ಅಡಿ ನಿರ್ಮಿಸಿರುವ ಅಮೃತ ಸರೋವರ ಕೆರೆ ಅಭಿವೃದ್ಧಿ ಹಾಗೂ ಏಕಲವ್ಯ ವಸತಿ ಶಾಲೆಯನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೊಟ್ಟಿಗೆವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಗೌಡ ಚಿದಾನಂದ ಗೌಡ ತುಪ್ಪದಗೌಡರ್ ಸರ್ಕಾರದಿಂದ ಪ್ರತಿ ವರ್ಷ 56 ಲಕ್ಷ ರೂಗಳ ಅನುದಾನ ನಮ್ಮ ಗ್ರಾಮ ಪಂಚಾಯಿತಿಗೆ ಬರುತ್ತಿದೆ. ಮಂಗಲ ಗ್ರಾಮ ಪಂಚಾಯತಿಯಲ್ಲಿ ಉತ್ತಮ ಕೆಲಸಗಳನ್ನು ಕೈಗೊಳ್ಳಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆರೆ ಅಭಿವೃದ್ದಿ ಮಾಡಿರುವುದು ಸೊಗಸಾಗಿದೆ ಎಂದು ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹನೂರು ತಾಲ್ಲೂಕು ಪಂಚಾಯತಿ ಮತ್ತು ಚಾಮರಾಜನಗರ ಜಿಲ್ಲಾ ಪಂಚಾಯತಿ ಮತ್ತು ಪಂಚಾಯತಿಯ ಆಡಳಿತ ಮಂಡಳಿಯ ಸಹಕಾರದಿಂದ ನಮ್ಮ ಗ್ರಾಮ ಪಂಚಾಯತಿಯ ಸಮಗ್ರ ಅಭಿವೃದ್ಧಿಯಾಗಿದೆ ಎಂದು ಮಂಗಳ ಗ್ರಾಮ ಪಂಚಾಯತಿ ಪಿಡಿಒ ದೊರೆ ತಿಳಿಸಿದರು.
ಈ ಕಲಿಕಾ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಹನೂರು ತಾಲೂಕಿನ ಮಂಗಲ ಮತ್ತು ಧಾರವಾಡ ಜಿಲ್ಲೆಯ ರೊಟ್ಟಿಗೆವಾಡ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಪಿಡಿಓ ಮತ್ತು ಸಿಬ್ಬಂದಿಗಳು ಪರಸ್ಪರ ಮಾತುಕತೆ ಮೂಲಕ ತಮ್ಮ ಪಂಚಾಯ್ತಿಯ ಅಭಿವೃದ್ದಿ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಮಾ ಟಿ ವೀರಭದ್ರ, ಉಪಾಧ್ಯಕ್ಷ ಶಿವಲಂಬಿಕಾ ಮತ್ತು ಸದಸ್ಯರು ಹಾಗೂ ಪಿಡಿಒ ದೊರೆ, ರೊಟ್ಟಿಗೆವಾಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳ ರಂಗಪ್ಪನವರ್, ಉಪಾಧ್ಯಕ್ಷ ಹಜರೆ ಸಾಬ್ ನದಾಫ್ ಮತ್ತು ಸದಸ್ಯರು ಉಪಸ್ಥಿತರಿದ್ದರು.