ಎಲ್ಲರ ಚಿತ್ತ್ ಆಳೂರ ಗ್ರಾಮ ಪಂಚಾಯತಯತ್ತ್..!
ಇಂಡಿ : ಬಹಳ ಕುತೂಹಲ ಕೆರಳಿಸಿರುವ ತಾಲ್ಲೂಕಿನ ಆಳೂರ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ. ಹೌದು ಇಂಡಿ ಪಟ್ಟಣದಿಂದ ಸುಮಾರು 10 ರಿಂದ 12 ಕಿಮೀ ದೂರ ಇರುವ ಈ ಗ್ರಾಮ. ಈ ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷ ಗದ್ದುಗೆ ಚುನಾವಣೆಯಲ್ಲಿ ಸೂಕ್ಷ್ಮ ಪ್ರದೇಶವಾಗಿ ನಿಂತಿತ್ತು. ಹಲವು ಬಾರಿ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಕಂಡಿದೆ. ಆದರೆ ಈ ಬಾರಿ ಶಾಂತವಾಗಿ ನಡೆಸಲು ಸೂಕ್ಷ್ಮ ತಯಾರ ಮಾಡಲಾಗಿದೆ. ಅಧ್ಯಕ್ಷ ಸಾಮಾನ್ಯ ಮತ್ತು ಉಪಾಧ್ಯಕ್ಷ ಸಾಮಾನ್ಯ “ಮಹಿಳೆ” ಮೀಸಲು ಇದ್ದು ಈ ಬಾರಿ ಗ್ರಾಮ ಪಂಚಾಯತ್ ನೂತನ ಸಾರಥಿಯಾಗಲೂ ಸುಮೀತ್ರಾ ಅಶೋಕ ನಾಯಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನರಸಬಾಯಿ ಚಾಬುಕಸವಾರ ಆಕಾಂಕ್ಷಿಯಾಗಿದ್ದು ಇನ್ನೇನು ಅರ್ಧ ಗಂಟೆಯಲ್ಲಿ ನಾಮ ಪತ್ರ ಸಲ್ಲಿಸುವರಿದ್ದಾರೆ. ಈ ಗ್ರಾಮ ಪಂಚಾಯತ್ ಸದಸ್ಯರ ಬಲ ಒಟ್ಟು 11 ಇದ್ದು ಕಾದು ನೋಡಬೇಕಾಗಿದೆ ಯಾರು ಎಲ್ಲಾ ನಾಮಪತ್ರ ಸಲ್ಲಿಸುವರು ಮತ್ತು ಪ್ರಭಲ ಸ್ಪರ್ಧಿಗಳಾಗಿ ನಿಲ್ಲುತ್ತಾರೆ ಎಂದು. ಒಟ್ಟಾರೆಯಾಗಿ ಇಂದು ಮಧ್ಯಾಹ್ನ ಹೊತ್ತಿಗೆ ಫಲಿತಾಂಶ ಹೊರಗೆ ಬರಲಿದ್ದು ಎಲ್ಲರ ಚಿತ್ತ ಆಳೂರ ಗ್ರಾಮದತ್ತ ಇದೆ.