ಸರಕಾರದ ಯೋಜನೆಗಳು ಜನರ ಮನೆ ಬಾಗಲಿಗೆ
ಇಂಡಿ : ಸರಕಾರವು ಬಡವರಿಗಾಗಿ, ವೃದ್ದರಿಗಾಗಿ ಅಂಗವೀಕಲರಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವರ ಮನೆ ಬಾಗಲಿಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಹೇಳಿದರು.
ತಾಲೂಕಿನ ಸಂಗೋಗಿ ಗ್ರಾಮದಲ್ಲಿ ನಡೆದ ಪಿಂಚಣ ಅದಾಲತ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ೨೨ ಅರ್ಜಿಗಳು ಸ್ವೀಕರಿಸಿದ್ದು ೨೨ ಅರ್ಜಿಗಳನ್ನು ಮಂಜೂರಾತಿ ನೀಡಿದೆ ಎಂದರು.ಅದರಲ್ಲಿ ವಯೋವೃದ್ದಿಗೆ ಮಾಶಾಸನ ೧೫, ಅಂಗವೀಕಲ ಒಂದು ಸೇರಿದಂತೆ ಒಟ್ಟು ೨೨ ಅರ್ಜಿ ಮಂಜೂರಾತಿ ನೀಡಿದೆ ಎಂದರು.
ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಎ.ಎ. ಗುನ್ನಾಪುರ ಮಾತನಾಡಿದರು.
ಮಲ್ಲು ಪೂಜಾರಿ, ಗ್ರಾಮ ಅಭಿವೃದ್ದಿ ಅಧಿಕಾರಿ ಅಶೋಕ ಹೊನವಾಡ, ರವಿ ಪೂಜಾರಿ, ಎನ್.ಕೆ.ಪೂಜಾರಿ, ಚೌವಡಪ್ಪ ಕುಂಬಾರ,ಅಶೋಕಗೌಡ ಬಿರಾದಾರ, ಬಾಳಾಸಾಹೇಬ ಪಾಟೀಲ,ಎನ್.ಜಿ.ಬಿಸನಾಳ,ಎಚ್.ಡಿ.ಗರ, ಸಿದ್ದು ಕುಂಬಾರ, ರಮೇಶ ಕುಂಬಾರ, ಶ್ರೀಶೈಲ ಬಿರಾದಾರ, ನಿಂಗು ಭಂಡಾರಿ ಮತ್ತಿತರಿದ್ದರು.
ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ನಡೆದ ಪಿಂಚಣ ಅದಾಲತ ಕಾರ್ಯಕ್ರಮದಲ್ಲಿ ಎಸಿ ಅನುರಾಧಾ ವಸ್ತçದ ಮಾತನಾಡಿದರು.




















