ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿ ಇಂದು ಜಗತ್ತು ಇಲ್ಲಿಯ ಸಂಸ್ಕೃತಿಯತ್ತ ಗಮನಿಸುತ್ತಿದೆ. ಯುವಕರು ಪಾಚ್ಶಿಮಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿದ್ದು ಗೋಳಸಾರ ಮಠ ಸಂಸ್ಕೃತಿ ಕಾರ್ಯ ಮಾಡುತ್ತಿದ್ದು ಕೊಪ್ಪಳ ಗವಿಸಿದ್ದೇಶ್ವರ ಮಠ ಸೇರಿದಂತೆ ಧರ್ಮ ದೇಶಾಭಿಮಾನಿ ಬೆಳೆಸುವಲ್ಲಿ ಮೂರನೆಯ ಸ್ಥಾನದಲ್ಲಿದ್ದ ಮಠವಾಗಿದೆ ಎಂದರು. ಇಂದು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನವದಂಪತಿಗಳ ಜೀವನ ಬದುಕು ಆದರ್ಶವಾಗಿರಲಿ,ಆದರ್ಶ ಬದುಕು ಶಾಂತಿ ಕೊಡುವ ಮೂಲಕ ಹೆಮ್ಮೆಯ ನವ ಜೀವನ ಸಾಗಿಸಲಿ ಎಂದರು.
ಮದನೂರದ ತಪೋಬಾಸ್ಕರ ಸಿದ್ದ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರರು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಯು.ಎನ್.ಕುಂಟೋಜಿ, ಎ.ಎಸ್.ಪಾಸೋಡಿ, ಎ.ಪಿ.ಕಾಗವಾಡಕರ, ಶಿಕ್ಷಕ ರವಿ ಆಳೂರ ಮಾತನಾಡಿದರು.
ವೇದಿಕೆಯ ಮೇಲೆ ಲಚ್ಯಾಣ ಬಂಥನಾಳ ಪೀಠದ ವೃಷಭಲಿಂಗೇಶ್ವರ ಶ್ರೀಗಳು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು,ಜೈನಾಪುರದ ರೇಣುಕಾ ಶ್ರೀಗಳು, ಶಿರವಾಳದ ಸೋಮನಿಂಗ ಮಹಾರಾಜರು, ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ದಯಾಸಾಗರ ಪಾಟೀಲ, ಬಾಬು ಸಾವಕಾರ ಮೇತ್ರಿ ಮಲ್ಲಿಕಾರ್ಜುನ ವಗ್ಗರ ಮತ್ತಿತರಿದ್ದರು.
ಇದೇ ವೇಳೆ ಡಾ. ಸೋಮನಾಥ ಯಾಳವಾರರವರು ಬರೆದ ಗುರು ಪುಂಡಲಿಂಗ ಲೀಲಾಮೃತ ಪುಸ್ತಕ ಬಿಡುಗಡೆ ಗೊಳಿಸಲಾಯಿತು. ನಿವೃತ್ತ ಉಪನ್ಯಾಸಕ ಯು.ಎನ್.ಕುಂಟೋಜಿ ಗ್ರಂಥ ಪರಿಚಯಿಸಿದರು.
ಇದೇ ವೇಳೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು ಸಾಹಿತ್ಯ ಮತ್ತು ಸೇವಾ ಕ್ಷೇತ್ರಕ್ಕಾಗಿ ಜಿ.ಎನ್.ತೆಗ್ಗೆಳ್ಳಿ, ಸಂಗೀತ ಕ್ಷೇತ್ರಕ್ಕಾಗಿ ಡಾ. ಶರಣಪ್ಪ ಮೆಡೆದಾರ, ವೈದ್ಯಕೀಯ ಕ್ಷೇತ್ರದ ಡಾ|| ಮಹೇಂದ್ರ ಕಾಪಸೆ, ಕೃಷಿ ಕ್ಷೇತ್ರದ ರಾಜಶೇಖರ ನಿಂಬರಗಿ, ಕ್ರೀಡಾ ಕ್ಷೇತ್ರದ ಕುಮಾರ ಚಂದ್ರಕಾಂತ ಬಡದಾಳ ಇವರನ್ನು ಸನ್ಮಾನಿಸಲಾಯಿತು.
ಇಂಡಿ ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀಶೈಲ ಶ್ರೀಗಳು ಮಾತನಾಡಿದರು.