ಉಚಿತ ನೋಟ್ ಪುಸ್ತಕ ವಿತರಣೆ..ಎಲ್ಲಿ..? ಯಾವ ಕಾರಣಕ್ಕೆ..?
ಹನೂರು: ತಾಲೂಕಿನ ಮಂಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ವಿಜಯ್ ಕುಮಾರ್ ವಿಜಯ್ ಫೌಂಡೇಶನ್ ನ ಅಧ್ಯಕ್ಷರು, ಹಾಗೂ ಶ್ರೀ ನರಸಿಂಹಮೂರ್ತಿ ನಿಕಟ ಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಗೋವಿಂದರಾಜ ನಗ ಇವರ ಸಮ್ಮುಖದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಣೆ ಮಾಡಿದರು.
ವಿಜಯ್ ಕುಮಾರ್ ಅವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ನಾವೆಲ್ಲರೂ ಬಾಲ್ಯದಿಂದಲೇ ಮಕ್ಕಳನ್ನು ಶೈಕ್ಷಣಿಕವಾಗಿ, ಹಾಗೂ ಸಾಮಾಜಿಕವಾಗಿ ಪ್ರೋತ್ಸಾಹವನ್ನು ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ಸಮೂಹ ಜೊತೆಯಲ್ಲಿದ್ದರೆ ಅವರ ಜೀವನಕ್ಕೆ ಸಹಾಯವಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ರಾಜ್ ಶ್ರೀಧರ್ ಲಕ್ಷ್ಮಿ ನಾರಾಯಣ ಕೃಷ್ಣಮೂರ್ತಿ ಕಿರಣ್ ಹಾಗೂ ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.