ಮಾಜಿ ಶಾಸಕ ನಡಹಳ್ಳಿ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಬಿಜೆಪಿ ರೈತ ಮೋರ್ಚಾ ರಾಜಾಧ್ಯಕ್ಷ ಮುದ್ದೇಬಿಹಾಳ ಮತಕ್ಷೇತ್ರದ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ 56 ನೇ ಹುಟ್ಟು ಹಬ್ಬದ ಅಂಗವಾಗಿ ಜುಲೈ 22 ಮಂಗಳವಾರ ಶಾಸಕರ ತೋಟದ ಮನೆಯಲ್ಲಿ ನಡಹಳ್ಳಿ ಅವರ ಅಭಿಮಾನಿಗಳು ತೀರ್ಮಾನಿಸಿದ್ದು ನಡಹಳ್ಳಿ ಅವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಿಜೆಪಿ ಮುಖಂಡ ಗಂಗಾಧರರಾವ್ ನಾಡಗೌಡ , ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾಧ್ಯಕ್ಷ್ಯ ಡಾ.ವಿರೇಶ ಪಾಟೀಲ್ ಹೇಳಿದರು ಶನಿವಾರ ದಾಸೋಹ ನಿಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಾಗಲಕೋಟೆಯ ಮುರಾಳ ಇನಾಮದಾರ ಆಸ್ಪತ್ರೆಯ ಡಾ.ರಾಘವೇಂದ್ರ ಮುರಾಳ ಅವರ ನೇತೃತ್ವದಲ್ಲಿ ನಡಹಳ್ಳಿ ಅವರ ತೋಟದ ಮನೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಇಸಿಜಿ, ಬಿಪಿ ಶುಗರ್ ತಪಾಸಣೆ ಮಾಡಲಾಗುತ್ತದೆ ಬೆಳಗ್ಗೆ 9 ಗಂಟೆಗೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುತ್ತದೆ ಸಾಯಂಕಾಲ 6 ಗಂಟೆಗೆ ಎ.ಎಸ್ ಪಾಟೀಲ್ ನಡಹಳ್ಳಿ ಅವರ ಹುಟ್ಟು ಹಬ್ಬ ತೋಟದ ಮನೆಯಲ್ಲಿ ನಡಹಳ್ಳಿ ಅವರ ಅಭಿಮಾನಿ ಬಳಗದಿಂದ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು
ಬಾಕ್ಸ್ : ಎ.ಎಸ್ ಪಾಟೀಲ್ ನಡಹಳ್ಳಿ ಅವರ ಹೋರಾಟದ ಫಲವಾಗಿ ಬೂದಿಹಾಳ ಪೀರಾಪೂರ ಏತನೀರಾವರಿ ಆಗಿದ್ದು ಸದ್ಯ ಈ ಯೋಜನೆ ಕಟ್ಟ ಕಡೆಯ ಹಳ್ಳಿಯ ರೈತರಿಗೆ ತಲುಪುತ್ತಿಲ್ಲ ಇದಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದು ನಡಹಳ್ಳಿ ಅವರು ರೈತಮೋರ್ಚಾದ ಅಧ್ಯಕ್ಷರಾದ ಕಾರಣ ಹುಟ್ಟು ಹಬ್ಬದ ದಿನದಂದು ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಸಾಯಂಕಾಲ ಅವರ ಹುಟ್ಟು ಹಬ್ಬ ಎಲ್ಲರೂ ಸೇರಿ ಆಚರಿಸಲಾಗುತ್ತದೆ.
.
ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಜುಲೈ ೨೨ ನಡಹಳ್ಳಿ ಅವರ ಹುಟ್ಟು ಹಬ್ಬದ ಅಂಗವಾಗಿ ನಡೆಯುವ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರದ ಸದುಪಯೋಗ ಪಡೆಯಬೇಕು ಉಚಿತ ಆರೋಗ್ಯ ತಪಾಸಣೆ ಗೆ ಸಿಟಿ ಸಾರಿಗೆ ಹಾಗೂ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗುತ್ತದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಜ ಹೂಳಿ, ಶ್ರೀಶೈಲ ದೂಡಮನಿ,ಡಾ.ಚಂದ್ರಶೇಖರ ಶಿವಯೋಗಿಮಠ, ಡಾ.ರೇವಣಸಿದ್ದಪ್ಪ ಮಸೂತಿ, ಸೋಮನಗೌಡ ಬಿರಾದಾರ, ಹರೀಶ್ ನಾಟಿಕಾರ,ಮದ್ದಾನಸ್ಥಾಮಿ ಹಿರೇಮಠ,ಗೌರಮ್ಮ ಹುನಗುಂದ, ಪ್ರೀತಿ ಕಂಬಾರ, ಪ್ರೇಮಾ ಕಂಬಾರ, ಹಣಮಂತ ದೇವರಳ್ಳಿ ಮುಂತಾದವರು ಭಾಗವಹಿಸಿದ್ದರು.