ಲಿಂಗಸೂಗೂರು: ಪೈದೊಡ್ಡಿ ಪಂಚಾಯಿತಿ ವ್ಯಾಪ್ತಿಯ ಪವಾಡ ಪುರುಷ, ದೊಡ್ಡಿಗಳ ಆರಾಧ್ಯ ದೈವ ಶ್ರೀ ಮುದಿ ಗ್ಯಾನೇಶ್ವರನ ಸನ್ನಿಧಿಯ ರಾಯನ ಕೇರಿ ದೊಡ್ಡಿಗೆ ಸ್ವಾತಂತ್ರ್ಯ ಬಂದು 70 ವಸಂತಗಳು ಕಳೆದರು ಬೆಳಕಿನ ದರ್ಶನವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ದೊಡ್ಡಿಯ ಜನರು ತಮ್ಮ ನೋವಿನ ಅಳಲನ್ನು ಮಾಜಿ ಶಾಸಕ ಮಾನಪ್ಪ ವಜ್ಜಲ್ ರವರ ಗಮನಕ್ಕೆ ತಂದಿದ್ದರು.
ವಿಷಯ ತಿಳಿದ ಮಾಜಿ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ 24 ಗಂಟೆ ಒಳಗಡೆ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಿ ಕತ್ತಲೆಯ ಕೂಪವಾಗಿದ್ದ ದೊಡ್ಡಿಗಳ ಜನರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿ ಕತ್ತಲೆಯ ಗ್ರಾಮಕ್ಕೆ ಬೆಳಕನ್ನು ಕೊಡಿಸಿದ್ದಾರೆ. ಅಲ್ಲದೆ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಡಾ: ಮಾನಪ್ಪ ಡಿ, ವಜ್ಜಲರು ಇಂದು ಅಧಿಕೃತವಾಗಿ ವಿದ್ಯುತ್ ಗುಂಡಿ ಒತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಡಾ : ಶಿವಬಸಪ್ಪ ಹೆಸರೂರು, ಹಾಗೂ ಪಕ್ಷದ ಮುಖಂಡರಾದ ಗಿರಿ ಮಲ್ಲನಗೌಡ ಪಾಟೀಲ್ ಕರಡಕಲ್, ಗೋವಿಂದ ನಾಯಕ್, ಹುಲ್ಲೇಶ್ ಸಾಹುಕಾರ್, ಪರಮೇಶ್ ಯಾದವ್, ಅಮರೇಶ್ ಹೆಸರೂರ, ದ್ಯಾಮಣ್ಣ ನಾಯಕ್, ಗುಂಡಪ್ಪ ಗೌಡ ಗುರಿಕಾರ್, ಅಬ್ದುಲ್ ಬೇಕರಿ, ಪೈದೊಡ್ಡಿ ಪಂಚಾಯಿತಿ ಅಧ್ಯಕ್ಷ &ಉಪಾಧ್ಯಕ್ಷರು , ಮುದುಕಪ್ಪ, ಶಿವಪ್ಪ ಗೊಲಪಲ್ಲಿ , ಸೇರಿದಂತೆ ಸಮಸ್ತ ಪೈದೊಡ್ಡಿ ಪಂಚಾಯಿತಿಯ ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.