ಮುದ್ದೇಬಿಹಾಳ ; ಶೈಕ್ಷಣಿಕ ಸಂಸ್ಥೆಗಳು ವಿದ್ಯೆಯನ್ನು ಮಾರುವಂತಾಗದೆ ವಿದ್ಯೆಯನ್ನು ನೀಡುವಂತಾಗಬೇಕು ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು ಅವರು ನಾಗರಬೆಟ್ಟ ಗುಡ್ಡದ ಹತ್ತಿರದ ಆಕ್ಸಪರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೀನಿಯಸ್ ಪ್ರಶಸ್ತಿ ಪ್ರಧಾನ ,ಎಂಬಿಬಿಎಸ್ ಗೆ ಆಯ್ಕೆಯಾದ 172 ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಹಿರಿಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ವಿದ್ಯಗೆ ವಿನಯವೇ ಬೋಷಣವಾವಿದೆ ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರವನ್ನು ನೀಡಬೇಕು ಈ ಕಾರ್ಯವನ್ನು ಆಕ್ಸಪರ್ಡ್ ಪಾಟೀಲ್ಸ್ ಸಂಸ್ಥೆ ಮಾಡುತ್ತಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಮತ್ತು ಗುರಿ ಇರಬೇಕು ಮಕ್ಕಳ ಏಳ್ಗೆಗೆ ಪಾಲಕರು ಮಾತ್ರವಲ್ಲದೆ ದೇಶವೇ ಹೆಮ್ಮೆಪಡುವಂತಾಗಬೇಕು ಇಂದು ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಜೋತೆಗೆ ಕೃಷಿ ವಿಜ್ಞಾನ ಶಿಕ್ಷಣ ಸಿಗಬೇಕು ವಿದೇಶಗಳಿಗೆ ಹೋಲಿಕೆ ಮಾಡಿದರೆ ಭಾರತವೇ ಶ್ರೇಷ್ಠವಾಗಿದೆ ನಾವು ಕೆಲಸವನ್ನು ಹುಡುಕುವಂತವರಾಗದೆ ಕೆಲಸ ಸೃಷ್ಟಿಮಾಡುವವರಾಗಬೇಕು ಎಂದರು.
ಆಕ್ಸ್‌ಫರ್ಡ್ ಪಾಟೀಲ್ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಮಾತನಾಡಿ ನಮ್ಮ ಸಂಸ್ಥೆ ಪ್ರತಿವರ್ಷ ಜೀನಿಯಸ್ ಅವಾರ್ಡ್ ನೀಡುತ್ತಾ ಬಂದಿದೆ ಕಳೆದ ಡಿಸೆಂಬರ್ ತಿಂಗಳಲ್ಲಿ ೨ ಕೋಟಿ ರೂ ಸ್ಕಾಲರ್ಶಿಪ್ ಪರೀಕ್ಷೆ ನಡೆಸಿ ಅದರಲ್ಲಿ 120 ವಿದ್ಯಾರ್ಥಿಗಳಿಗೆ ೨ ವರ್ಷ ಊಟ ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಿದೆ ಪ್ರತಿ ವರ್ಷ 10 ನೇ ತರಗತಿ ಪರೀಕ್ಷೆ ಮುಗಿದ ಮಾರನೇ ದಿನ ಜೀನಿಯಸ್ ಅವಾರ್ಡ್ ಪರೀಕ್ಷೆ ಮಾಡುತ್ತ ಬಂದಿದೆ. ನಮ್ಮ ಸಂಸ್ಥೆಯಲ್ಲಿ 172 ವಿದ್ಯಾರ್ಥಿಗಳು ಎಂಬಿಬಿಎಸ್ ಗೆ ಆಯ್ಕೆಯಾದ ಎಂದರು.
ಜೀನಿಯಸ್ ಅವಾರ್ಡ್ ಗೆದ್ದ ವಿದ್ಯಾರ್ಥಿಗಳು; ಪ್ರಥಮ. ೭೫ ಸಾವಿರ ನಗದು ಬಹುಮಾನ ಪಡೆದ ವಿದ್ಯಾರ್ಥಿ ಅಶ್ವಿನಿ ಬಡಮಲ್ಲಣ್ಣನವರ, ದ್ವೀತಿಯ 50 ಸಾವಿರ ನಗದು ಬಹುಮಾನ ಇಬ್ಬರಲ್ಲಿ ಹಂಚಿಕೆಯಾಗಿದೆ ಪವಿತ್ರ ಬಿರಾದಾರ, ಶರತ್ ಸಜ್ಜನ, ತೃತೀಯ 30 ಸಾವಿರ ನಗದು ಮಹಮ್ಮದ್ ಝಾಯಿನ್ , ನಾಲ್ಕನೇ 15 ಸಾವಿರ ನಗದು ಬಹುಮಾನ ಪರೀಕ್ಷಿತಾ ಮುಕ್ಕಣ್ಣನವರ, ಐದನೇ 10 ಸಾವಿರ ನಗದು ನಿತೀಶ ಪಟ್ಟಣಶೆಟ್ಟಿ, ಆರನೇ 5 ಸಾವಿರ ನಗದು ಬಹುಮಾನ ಸಮೃದ್ದ ಅಂಗಡಿ ಮತ್ತು ಅತಿಹೆಚ್ಚು ಅಂಕಗಳನ್ನು ಪಡೆದ ಮೊದಲ 10 ವಿದ್ಯಾರ್ಥಿಗಳಿಗೆ 2500 ರೂ ನಗದು ಬಹುಮಾನ ಈ ವೇಳೆ ನೀಡಲಾಯಿತು ಮತ್ತು ಕಾರ್ಯಕ್ರಮದಲ್ಲಿ
ನೀಟ್ ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಹೆಸರಾಂತ ಮೆಡಿಕಲ್ ಕಾಲೇಜುಗಳಿಗೆ ಎಂಬಿಬಿಎಸ್ ಗೆ ಆಯ್ಕೆಯಾದ 12 ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ ನಗದು ಪುರಸ್ಕಾರ ಹಾಗೂ ಕಳದೆ ವರ್ಷ ಎಂಬಿಬಿಎಸ್ ಗೆ ಆಯ್ಕೆಯಾದ 172 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು
ಸರಕಾರಿ ವಸತಿಯುಕ್ತ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶರಣು ಪಾಟೀಲ್ ಬಿಇಒ ಬಿ ಎಸ್ ಸಾವಳಗಿ, ಸಂಗಮೇಶ ಹೂಗಾರ, ಡಾ.ಡಿ ಆರ್ ಮಳಖೇಡ , ಡಾ.ಪರಶುರಾಮ ವಡ್ಡರ, ಹಳೆಯ ವಿದ್ಯಾರ್ಥಿ ಮಹಮ್ಮದ್ ಸಲಿಂ ಮಾತನಾಡಿದರು
ಸಂಸ್ಥೆಯ ಆಡಳಿತ ಅಧಿಕಾರಿ ಅಮಿತಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು ನಿರ್ದೇಶಕ ದರ್ಶನಗೌಡ ಪಾಟೀಲ್, ಹರಿಶ್ಚಂದ್ರ ನಾಯಕ, ಡಾ. ಸುಮಲತಾ , ಡಾ. ನಿಖಿತಾ ಎನ್ ಕೆ ಇತರರು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಸೃಷ್ಟಿ ಪ್ರಾರ್ಥಿಸಿದಳು ಪ್ರಾಂಶುಪಾಲ ರೇವಣಸಿದ್ದಪ್ಪ ಚಲವಾದಿ ಸ್ವಾಗತಿಸಿ ಪರಿಚಯಿಸಿದರು , ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ ನಿರೂಪಿಸಿದರು ಪರಶುರಾಮ ಹೂಗಾರ ವಂದಿಸಿದರು.