ಪರಿಸರ ಉಳುವಿಗಾಗಿ ವಿಶೇ಼ಷ ಕಾಳಜಿ ಅಗತ್ಯ
ಇಂಡಿ : ಕೈಗಾರಿಕರಣ, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ ಹತ್ತು ಹಲವು ಕಾರಣಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದ ಮನುಷ್ಯನಲ್ಲಿ ಹೃದಯ, ಉಸಿರಾಟ ಸಂಬAಧಿತ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳಂತಹ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಪರಿಸರ ಉಳಿವಿಗಾಗಿ ವಿಶೇಷ ಕಾಳಜಿವಹಿಸಬೇಕು ಎಂದು ಪ್ರಾಚಾರ್ಯ ಡಾ.ಎಸ್.ಬಿ.ಜಾಧವ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತç ವಿಭಾಗ, ಎನ್ನೆಸ್ಸೆಸ್ ಯುತ್ ರೆಡ್‌ಕ್ರಾಸ್ ಮತ್ತು ರೇಂರ‍್ಸ್ & ರೋರ‍್ಸ್ ಘಟಕದ ಅಡಿಯಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮ ಜರುಗಿತು.
ಹಸಿರೇ ಉಸಿರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಪ್ರಪಂಚದಾದ್ಯAತ ಪರಿಸರವನ್ನು ನಾಶಮಾಡಿ ಕಾಂಕ್ರೀಟ್ ಹಾಸಿಗೆಯನ್ನು ಹಾಕುತ್ತಿರುವದರಿಂದ ನಾವು ಕೆಲವೇ ವರ್ಷಗಳಲ್ಲಿ ವಿನಾಶದ ಹಾದಿ ತುಳಿಯುತ್ತಿದ್ದೇವೆ ಎಂದರು.
ಮನೆಗೊಂದು ಸಸಿಯನ್ನು ನೆಟ್ಟು ಪೋಷಿಸಬೇಕು. ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತನ್ನು ನಾಶಮಾಡಿ ನಗರೀಕರಣ ಜೀವನ ಒಪ್ಪಿಕೊಂಡಿದ್ದಾನೆ. ಹಾಗಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ಲಭ್ಯವಿರುವ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮರ-ಗಿಡಗಳನ್ನು ನೆಟ್ಟು ಪೋಷಿಸುವದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯ. ಈ ವರ್ಷದ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಮಣ ಸಿ’ ಎಂದಾಗಿದ್ದು, ಇದರಡಿಯಲ್ಲಿ ಈಗ ಕೆಲಸ ನಿರ್ವಹಿಸಬೇಕಾಗಿದೆ.” ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವಾಸ ಕೋರವಾರ, ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಶ್ರೀ.ಶ್ರೀಶೈಲ, ರೇಂರ‍್ಸ್ & ರೋರ‍್ಸ್ ಘಟಕದ ಅಧಿಕಾರಿ ಡಾ.ಶ್ರೀಕಾಂತ ರಾಠೋಡ, ಶ್ರೀ.ಮಲ್ಲಿಕಾರ್ಜುನ ಕೋಣದೆ ಪರಿಸರ ಕುರಿತು ಮಾತನಾಡಿದರು.
ಡಾ. ಆನಂದ ನಡುವಿನಮನಿ, ಪ್ರಶಾಂತ ಹಿರೇಮಠ, ಆನಂದ ತಾಂಬೆ, ಪಂಕಜಾ ಕುಲಕಣ ð, ಶೃತಿ ಪಾಟೀಲ, ಶ್ವೇತಾ ಕಾಂತ, ಶೃತಿ ಬಿರಾದಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ, ಪದವಿ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಮೂಲಕ ‘ವಿಶ್ವ ಪರಿಸರ ದಿನಾಚರಣೆ’ ಆಚರಿಸಿದರು.



















