ಇಂಡಿ : ಸಿಡಿಲು ಬಡಿದು ಎತ್ತು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ನಡೆದಿದೆ. ಇನ್ನೂ ಶಿರಶ್ಯಾಡ ಗ್ರಾಮದ ದೊಡ್ಡಪ್ಪ ಬಸಪ್ಪ ನಾಗಾವಿ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಮಳೆ ಬರುವ ವೇಳೆಯಲ್ಲಿ ತೋಟದಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದ ಪರಿಣಾಮ ಎತ್ತು ಅಸುನೀಗಿದೆ. ಅದಕ್ಕಾಗಿ ಪ್ರಕೃತಿ ವಿಕೋಪ ಅಡಿಯಲ್ಲಿ ಪರಿಹಾರ ನೀಡುವಂತೆ ರೈತ ದೊಡ್ಡಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.