ಜಲಧಾರೆ ಕಾಮಗಾರಿಯಿಂದ ಹಾನಿ/ಅಡವಿ ಸೋಮನಾಳ ಬಹುಹಳ್ಳಿ ಕುಡಿಯುವ ಯೋಜನೆಯ 32 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ.
ಜಲಧಾರೆ ಯೋಜನೆ ಕಾಮಗಾರಿಯಿಂದ ಕುಡಿಯುವ ಬಂದ್, ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ತೊಂದರೆ ಗ್ರಾಮಸ್ಥರು ಪರದಾಟ.
ವಿಶೇಷ ವರದಿ : ಬಸವರಾಜ ಈ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ತಾಲ್ಲೂಕಿನ ನಾಗಬೇನಾಳ ರಸ್ತೆಯ, ಆರೆಶಂಕರ ಕ್ರಾಸ್ ಹತ್ತಿರ ಬಹು ಹಳ್ಳಿ ಕುಡಿಯುವ ನೀರಿನ ಪೈಪ್‌ಗಳಿಗೆ ಜಲಧಾರೆ ಕಾಮಗಾರಿಯಿಂದ ಹಾನಿಯಾಗಿದ್ದು,
ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಸೋಮನಾಳ ಯೋಜನೆಯ (ನಾಗರಬೆಟ್ಟಗುಡ್ಡ) 32 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಾರ್ಚ್ 17ರಂದು ಪೈಪ್ ಒಡೆದು ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದ್ದರೂ, ಇದನ್ನು ದುರಸ್ತಿ ಮಾಡಲು (ಜಿವಿಪಿಆರ್ ಕಂಪನಿ)ಜಲಧಾರೆ ಯೋಜನೆಯ ಗುತ್ತಿಗೆದಾರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರಿನ ಕೊರತೆ – ಗ್ರಾಮಸ್ಥರ ಸಂಕಷ್ಟ ಈ ಘಟನೆಯ ಪರಿಣಾಮ,
ತಾಲೂಕಿನ ಅಡವಿ ಸೋಮನಾಳ ಬಹುಹಳ್ಳಿ ಕುಡಿಯುವ ನೀರಿನ ಪೂರೈಕೆ ಅಸ್ತವ್ಯಸ್ತಗೊಂಡಿದೆ.ಬೇಸಿಗೆಗಾಲದಲ್ಲಿ ನೀರಿನ ತೊಂದರೆ ಈಗಾಗಲೇ ತೀವ್ರವಾಗಿರುವಾಗ,ಜಲಧಾರೆ ಕಾಮಗಾರಿಯಿಂದಾಗಿ ಈ ಸಮಸ್ಯೆ ಇನ್ನೂ ಗಂಭೀರಗೊಂಡಿದೆ ಎಂದು ಸ್ಥಳೀಯರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಅಗ್ರಹವಾಗಿದೆ
ಜಲಧಾರೆ ಕಾಮಗಾರಿಯ ನಿರ್ವಹಣೆಯ ಕುರಿತು ರೈತ ಹೋರಾಟಗಾರ ಸಂಗಮೇಶ ನಾಗೂರ ಗುಂಡಕನಾಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕುಡಿಯುವ ನೀರಿನ ಪೈಪ್‌ಗಳ ಹತ್ತಿರ ಜಲಧಾರೆ ಪೈಪ್‌ಗಳನ್ನು ಅಳವಡಿಸುವುದರಿಂದ ಹಾನಿಯಾಗುತ್ತಿದೆ. ಇದರಿಂದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಪೈಪ್ ಒಡೆದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ.
ಈ ಸಮಸ್ಯೆಯ ಕುರಿತು ಕುಡಿಯುವ ನೀರಿನ ಪೈಪ್ ಒಡೆದಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ದುರಸ್ತಿ ಮಾಡಿಸುವಂತೆ ಯೋಜನೆ ಕಂಪನಿ ಅವರಿಗೆ ಸೂಚಿಸಲಾಗುತ್ತದೆ. ಮೇಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು” ಎಂದು ಹೇಳಿದರು. ಆರ್.ಎಸ್. ಹಿರೇಗೌಡರ ಎಇಇ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಪೂರೈಕೆ ಇಲಾಖೆ.