ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ : ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ‘ಯಜಮಾನ’ ಅಜರಾಮರ
ಇಂಡಿ : ಕನ್ನಡ ನಾಡು –ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ.ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಡಾ.ವಿಷ್ಣು ಸೇನಾ ಸಮಿತಿ ತಾಲೂಕು ಅಧ್ಯಕ್ಷ ಅಂಬರೀಶ್ ಕೊರಹಳ್ಳಿ ಶ್ಲಾಘಿಸಿದರು.
ಪಟ್ಟಣದ ವಿಜಯಪುರ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಎದುರು ನಿರ್ಮಿಸಿರುವ ಡಾ. ವಿಷ್ಣುವರ್ಧನ್ ವೃತ್ತದಲ್ಲಿ ಸಿಹಿ ಹಂಚುವ ಮೂಲಕ ಕನ್ನಡ ನಾಡಿನ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆಯನ್ನು ವಿಷ್ಣು ಸೇನಾ ಸಂಘಟನೆ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಸೇರಿ ಆಚರಿಸಿ ಮಾತಾನಾಡಿದರು.
ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್. ಆ ಮೇರು ನಟನ ಆದರ್ಶಮಯ ಜೀವನ ಮಾದರಿ. ಸದಾಕಾಲವೂ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು. ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದರು.
ಇನ್ನೂ ಇದೆ ಸಂದರ್ಭದಲ್ಲಿ ಡಾ. ರಾಜಶೇಖರ್ ಕೋಳಕರ್ ಅವರು ಮಾತಾನಾಡಿ, ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಾಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಹಾಗೂ ನಮ್ಮಲ್ಲರಿಗೂ ಮಾದರಿ ಎಂದರು.
ಅವರು ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್. ‘ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ’ ಅಂತಲೇ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೀವು ಬಡಿಗೇರ, ಗೌರವ ಅಧ್ಯಕ್ಷ ದಯಾನಂದ ಹೊಸಮನಿ, ಎಮ್ ಪಿ ವರ್ದನ್, ಚಂದ್ರಶೇಖರ ಬಲವಂತಿ ವಕೀಲರು, ಪ್ರದೀಪ ಪವಾರ, ಸಂಜು ನಾಯಕೋಡಿ, ಉದಯ ಹೊಸಮನಿ, ಮುರಳಿ ಬರುಟುಗಿ ಸಚೀನಗೌಡ ಪಹಿರೇಮಠ , ಸಚೀನ್ ಹಿರೇಮಠ, ರವಿ ಹೂಗಾರ ಹಾಗೂ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.