ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ದೇಶದ ಉನ್ನತ ಕಾಲೇಜುಗಳಲ್ಲಿ 28ನೇ ರ‍್ಯಾಂಕ್
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ದೇಶದ ಉನ್ನತ ಕಾಲೇಜುಗಳಲ್ಲಿ 28ನೇ ರ‍್ಯಾಂಕ್ ಲಭಿಸಿದೆ.
ನ್ಯಾಷನಲ್ ಟೈಮ್ಸ್ ಎಂಜಿನಿಯರಿಂಗ್ ರ‍್ಯಾಂಕಿಂಗ್ ನಡೆಸಿದ ಸಮೀಕ್ಷೆಯಲ್ಲಿ ಈ ಸ್ಥಾನ ಪ್ರಾಪ್ತವಾಗಿದೆ. ಈ ಸಂಸ್ಥೆ ದೇಶದ ನಾನಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಮೀಕ್ಷೆ ನಡೆಸಿದ್ದು, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿಗೆ ದೇಶದ ಉನ್ನತ 125 ಕಾಲೇಜುಗಳ ಪೈಕಿ 28 ರ‍್ಯಾಂಕ್ ಲಭಿಸಿದೆ.
ಅಷ್ಟೇ ಅಲ್ಲ, ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ವ್ಯವಸ್ಥೆ ಮಾಡುವಲ್ಲಿ ದೇಶದ ಉನ್ನತ 70 ಖಾಸಗಿ ಕಾಲೇಜುಗಳ ಪೈಕಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿಗೆ 45ನೇ ರ‍್ಯಾಂಕ್ ಬಂದಿದೆ. ಇದರ ಜೊತೆಗೆ ದಕ್ಷಿಣ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜು ವಿಭಾಗಗಳಲ್ಲಿ 15ನೇ ರ‍್ಯಾಂಕ್ ಲಭಿಸಿದೆ.
ಕಾಲೇಜಿನ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸಂತನ ವ್ಯಕ್ತಪಡಿಸಿದ್ದು, ಕಾಲೇಜಿನ ಎಲ್ಲ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ನಿರ್ದೇಶಕ ಡಾ. ವಿ. ಜಿ. ಸಂಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.