ಲಿಂಗಸೂಗೂರು: ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ॥ ಬಿ.ಆರ್. ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಪಿ.ಎಸ್.ಐ. ಪ್ರಕಾಶ ರೆಡ್ಡಿ ಡಂಬಳ್ ಡಾ॥ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪುಷ್ಪಾರಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ನಮ್ಮ ದೇಶದ ಎಲ್ಲಾ ವರ್ಗದ ಜನರು ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕು ಸಾಗಿಸಲು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವನ್ನು ಕೊಟ್ಟಿದ್ದಾರೆ. ನಾವು ಸಂವಿಧಾನದ ಆಶಯದ ಪ್ರಕಾರ ಎಲ್ಲಾ ವರ್ಗದ ಜನರು ಸಹೋದರತ್ವದ ಭಾವನೆಯಿಂದ ಬದುಕಬೇಕೆಂದು ಹೇಳಿದರು.
ಕರವೇ ಅಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ ತಮ್ಮ ಜೀವನದಲ್ಲಿ ಎಷ್ಟೇ ಶೋಷಣೆಯಾದರೂ ಹೆದರದೆ ಶಿಕ್ಷಣದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿ ಶೋಷಿತ ವರ್ಗಕ್ಕೆ ಕತ್ತಲೆಯಿಂದ ಬೆಳಕಿಗೆ ತಂದ ಮಹಾ ನಾಯಕರಾಗಿದ್ದಾರೆ. ಅವರು ಕೇವಲ ಶೋಷಿತ ವರ್ಗಕ್ಕೆ ಮಾತ್ರ ಆಸ್ತಿ ಅಲ್ಲ. ಈ ದೇಶದ ಪ್ರತಿಯೊಂದು ಸಮಾಜದ ಆಸ್ತಿಯಾಗಿದ್ದಾರೆ. ಸರ್ವ ಧರ್ಮದ ಸಮಾನತೆಯ ಹರಿಕಾರರು ಆಗಿದ್ದಾರೆ. ಇಂತಹ ಮಹಾನಾಯಕ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಎನ್.ಖಾದ್ರಿ, ಸಾಬು ಹುಸೇನ್, ಪುರಸಭೆ ಸದಸ್ಯರಾದ ದುರಗಪ್ಪ ಕಟ್ಟಿಮನಿ, ಮಹೆಬೂಬ್ ಕಡ್ಡಿಪುಡಿ, ಕರವೇ ನಾಗರಾಜ ನಾಯಕ, ಇಸ್ಮಾಯಿಲ್ ಬಳಿಗಾರ, ಅಬ್ದುಲ್ ಮಜೀದ್, ಭೀಮಣ್ಣ ಉಪ್ಪಾರ, ಬಾಲಪ್ಪ ಉಪ್ಪಾರ, ಸಾಬೀರ್ ಪಾಷ, ಜವಾಹರಲಾಲ್ ಸೇಠ್, ಕೃಷ್ಣ ಛಲವಾದಿ, ಮೌನೇಶ ಛಲವಾದಿ, ರವಿ ವಡ್ಡರ ಉಪಸ್ಥಿತರಿದ್ದರು.