ಇಂಡಿ : ಸಕಲ ಸಂಗೀತ ವಾಧ್ಯಗಳೊಂದಿಗೆ ತಮಟೆ, ಹಲಗೆ ಡೊಳ್ಳು ಕುಣಿತದೊಂದಿಗೆ ಕತ್ತೆಗಳ ಮದುವೆ ಮಾಡಲಾಯಿತು. ಹೌದು ರೈತರು ಮಳೆಗಾಗಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಕತ್ತಿಗಳ ಸಕಲ ಸಂಗೀತ ವಾಧ್ಯಗಳೊಂದಿಗೆ ಮೆರವಣಿಗೆ ಮಾಡಿದರು.
ವಾಸ್ತವದಲ್ಲಿ ಮದುವೆಗೆ ಯಾವುದೇ ಸಾಂಪ್ರದಾಯಿಕ ಸಂಪ್ರದಾಯದ ಕೋರತೆ ಕಾಣದಂತೆ ಸಾಮನ್ಯರ ಮದುವೆಯಂತೆ ನಡೆಯಿತು. ಮದುವೆಯಲ್ಲಿ ಹೆಣ್ಣಿನ ಕಡೆಯವರು ಮತ್ತು ಗಂಡಿನ ಕಡೆಯವರು ಸೇರಿ ಸಕ್ಕರೆ ಹಂಚಿ ಬೀಗ ಬೀಗರು ಎದುರು ಬೇಟಿ ತೆಗೆದುಕೊಂಡರು.
ನಂತರ ಗ್ರಾಮದ ಮಹಿಳೆಯರು ನೂಲ ಸುತ್ತಿ, ಅರಶಿಣ ಹಚ್ಚಿ, ಆಯೇರಿ ಮಾಡಿ ಸಕಲ ವಾಧ್ಯಗಳೊಂದಿಗೆ ಗ್ರಾಮದ ಭೀರಲಿಂಗೇಶ್ವರ ಪಲ್ಲಕ್ಕಿ ಮನೆಯಿಂದ ಪ್ರಮುಖ ರಸ್ತೆಯ ಮೂಲಕ ಪ್ರತಿ ಮನೆಯಿಂದ ಕತ್ತೆಗಳಿಗೆ ನೀರು ಹಾಕಿ ಅರಶಿಣ ಕುಂಕುಮ ಹಚ್ಚಿ ಪೂಜೆ ಮಾಡಿದರು. ಇನ್ನೂ ಸುಮಂಗಲಿಯರಿಂದ ಆರತಿ, ಆಯೇರಿ ಕಾರ್ಯಕ್ರಮ ನಡೆಯಿತು.
ಇನ್ನೂ ಮೆರವಣಿಗೆ ಮಲ್ಲಿಕಾರ್ಜುನ ದೇವಾಲಯದ ಪ್ರಮುಖ ರಸ್ತೆಯ ಮೂಲಕ ಕತ್ತೆಗಳ ಮದುವೆ ಮೆರವಣಿಗೆ ಹಣಮಾನ ಮಂದಿರ, ಶ್ರೀ ಭೀರಲಿಂಗೆಶ್ವರ ದೇವಸ್ಥಾನ ಆವರಣದ ವರೆಗೆ ಮೆರವಣಿಗೆ ಸಾಗಿತು.
ಮದುವೆಯಲ್ಲಿ ಭಾಗವಹಿಸಿದ ಹೆಣ್ಣು ಮತ್ತು ಗಂಡು ಕತ್ತೆಗಳ ಹಾಗೂ ಅಡ್ಡ ಭೀಗರಿಗೆ ಹುಗ್ಗಿ ಮತ್ತು ಅನ್ನ ಸಾಂಬರ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ರೀತಿಯಲ್ಲಿ ವಿಜಂಬಣೆಯಿಂದ ಝಳಕಿ ಗ್ರಾಮದ ರೈತರು, ಮಹಿಳೆಯರು ಸೇರಿದಂತೆ ಕತ್ತೆಗಳ ಮದುವೆ ಮಾಡಿ ಗ್ರಾಮದ ತುಂಬೆಲ್ಲಾ ಹಲಗೆಯೊಂದಿ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಣ್ಣಪ್ಪ ತಳವಾರ, ಅಶೋಕ ಕಾಪಸೆ, ಶಂಕರಗೌಡ ಬಿರಾದಾರ, ರವಿ ಹೂಗಾರ, ಹುಸೇನಿ ಪಾಚ್ಚಂಗಿ, ತುಕಾರಾಮ ಕಾಗರ, ಹಣಮಂತ ಕೋಳಿ ಇನ್ನೂ ಅನೇಕ ಜನರು ಉಪಸ್ಥಿತರಿದ್ದರು.