ಇಂಡಿಯಲ್ಲಿ ರಂಜಾನ್ ಹಬ್ಬ ಹೇಗಿತ್ತು ಗೊತ್ತಾ..?
ಇಂಡಿ: ಪವಿತ್ರ ಹಬ್ಬಗಳಲ್ಲಿ ಶ್ರೇಷ್ಠವಾಗಿರುವ ರಂಜಾನ್ ಹಬ್ಬವನ್ನು ಇಂಡಿ ತಾಲುಕಿನಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ಈದ್- ಉಲ್-ಫಿತರ್ (ರಂಜಾನ್) ಹಬ್ಬವನ್ನು ಸಡಗರ-ಸಂಭ್ರಮದಿಂದ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಎಲ್ಲಡೆ ಸಂಭ್ರಮದ ವಾತಾವರಣವಿತ್ತು. ಮಕ್ಕಳು ನಲಿದಾಡಿದರು.
ಈದ್ಗಾಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಮುಗಿಯುತ್ತಲೇ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಹಲವು ಕಡೆಗಳಲ್ಲಿ ಜನಪ್ರತಿನಿಧಿಗಳು ಸಹ ನಮಾಜಿನಲ್ಲಿ ಪಾಲ್ಗೊಂಡು ಮುಸ್ಲಿಂರಿಗೆ ಶುಭ ಕೋರಿದರು. ಸಿರಕುರಮಾ ರಂಜಾನ್ ಹಬ್ಬದ ಸಿಹಿ ಹೆಚ್ಚಿಸಿತ್ತು. ಹಿಂದು-ಮುಸ್ಲಿಂರು ಸಹ ಇದ್ ಮುಬಾರಕ್ ವಿನಿಯಮ ಮಾಡಿಕೊಳ್ಳುವ ಮೂಲಕ ಸೌಹಾರ್ದತೆ ಮೆರೆದರು.
ಹಿಂದುಗಳಿಗೆ ಶ್ರಾವಣದಷ್ಟೆ ಪವಿತ್ರವಾಗಿರುವುದು ರಂಜಾನ್ ಮಾಸ. ಹೀಗಾಗಿ ರಂಜಾನ್ ಶುರುವಾಗಲುತ್ತಲೇ ಒಂದು ತಿಂಗಂಳಿಂದ ಮುಸ್ಲಿಂ ಬಾಂಧವರು ಉಪವಾಸ ವೃತ ರೋಜಾ ಆಚರಿಸಿಕೊಂಡು ಬಂದಿದ್ದರು ಮುಸ್ಲಿಂ ಬಾಂಧವರು ಕೊನೆಯ ದಿನ ಈದ್ಗಾ ಮೈದಾನ, ಮಸೀದಿಗಳಿಗೆ ಬೆಳಗ್ಗೆ ಶುರ್ಚಿಭೂತರಾಗಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು.
ಪಟ್ಟಣದ ಹಂಜಗಿ ರಸ್ತೆಯ ಈದಗಾ ಮೈದಾನದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಶಾಕೀರ ಹುಸೇನ ಮೌಲಾನಾ ಇವರು ಸಾವಿರಾರು ಮುಸ್ಲಿಂ ಬಾಂಧವರಿಗೆ ನಮಾಜು ಬೋಧಿಸಿದರು. ಪುಟಾಣ ಗಳು, ವೃದ್ಧರು, ಯುವಕರು ಹೀಗೆ ಎಲ್ಲರೂ ಸಂಭ್ರಮದಲ್ಲಿ ಪಾಲ್ಗೊಂಡರು.
ಆಪ್ತರು, ಸ್ನೇಹಿತರು, ಬಂಧುಗಳನ್ನು ಮನೆಗೆ ಆಹ್ವಾನಿಸಿ ಹಾಲು- ಡ್ರೈ ಫ್ರೂಟ್ಸ್ಗಳನ್ನು ಬಳಸಿ ತಯಾರಿಸುವ ಸಿರಕುರಮಾ (ಸುರಕುಂಬಾ)ವನ್ನು ನೀಡಿ ಆದರಾತಿಥ್ಯವನ್ನು ನೀಡಲಾಯಿತು. ಬಂದವರಿಗೆ ಬಿರಿಯಾನಿ ಮೊದಲಾದ ಭರ್ಜರಿ ಭೋಜನಗಳನ್ನು ಹಾಕಿಸಿ ಧನ್ಯತೆ ಮೆರೆದರು.
ಪ್ರಾರ್ಥನೆಯಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಜಿಯಾಲಿ ಬಾಗವಾನ, ಕಾರ್ಯದರ್ಶಿ ಹುಸೇನಸಾಬ ಜಮಾದಾರ, ಜಾವೇದ ಮೋಮೀನ, ಅಬ್ದುಲ ರಹಮಾನ ಅರಬ, ಅಯೂಬ ಬಾಗವಾನ, ಅಬ್ದುಲ ರಶೀದ ಅರಬ, ಬಾಬುಸಾಬ ಸೌದಾಗರ, ಜುನಾದ್ದೀನ ಬಾಗವಾನ, ರೈಸ ಅಷ್ಟೆಕರ, ಯಾಸೀನ ತುರ್ಕಿ, ಮುಸ್ತಾಕ ಇಂಡಿಕರ, ಮಹಿಬೂಬ ಅರಬ, ಅಬ್ದುಲ ರಶೀದ ಮುಗಳಿ, ತುರಬ ಪಠಾಣ, ನಿಸಾರ ಬಾಗವಾನ, ರಾಜ ಅಹಮ್ಮದ ತುರಕರಗೇರಿ, ಮುಸ್ತಾಕ ನಾಯಿಕೊಡಿ. ಮಹಮ್ಮದ ಗುಲಬರ್ಗಾ, ಮಹಿಬೂಬ ಮಕಾನದಾರ ಮತ್ತಿತರಿದ್ದರು.
ಇಂಡಿ: ಪಟ್ಟಣದ ಈದಗಾ ಮೈದಾನದಲ್ಲಿಶಾಕೀರ ಮೌಲಾನಾ ನಮಾಜು ಬೋಧಿಸಿದರು.




















