ಹೊರಗುತ್ತಿಗೆಯಾಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ನೇರ ಸಂದರ್ಶನ
ವಿಜಯಪುರ,ಜುಲೈ 20: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ-ಕಾಲೇಜ್‍ಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಗುತ್ತಿಗೆಯಾಧಾರದ ಮೇಲೆ ನೇಮಕಾತಿಗಾಗಿ ಇಂದಿರಾ ಗಾಂಧಿ ವಸತಿ ಶಾಲೆ, ಜೈನ್ ಮಂದಿರ ಹತ್ತಿರ, ಹಂಚನಾಳ ರಸ್ತೆ, ವಿಜಯಪುರದಲ್ಲಿ ಜು.27ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.
ಗಣಕಯಂತ್ರ ಉಪನ್ಯಾಸಕರು-01, ರಸಾಯನ ಉಪನ್ಯಾಸಕರು-01, ವಿಜ್ಞಾನ ಶಿಕ್ಷಕರು-01, ಸಮಾಜ ವಿಜ್ಞಾನ ಶಿಕ್ಷಕರು-01, ಆಂಗ್ಲಭಾಷಾ ಶಿಕ್ಷಕರು-01 ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳು ಹಾಗೂ ಒಂದು ಝರಾಕ್ಸ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡಿ.ಎಂ.ಚಲವಾದಿ, ಜಿಲ್ಲಾ ಸಮನ್ವಯಾಧಿಕಾರಿಗಳು, ಕ್ರೈಸ್, ವಿಜಯಪುರ ಮೊ: 9880899510 ಸಂಖ್ಯೆಗೆ ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.