ರಾಯಚೂರು : ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಗರದ ಕೇಂದ್ರೀಯ ಗ್ರಂಥಾಲಯದಲ್ಲಿ ರಾಯಚೂರು ಸಿಇಒ ನೂರ್ ಜಹಾರಾ ಖಾನಂ ಡಿಜಿಟಲ್ ಗ್ರಂಥಾಲಯಕ್ಕೆ ರಿಬ್ಬಿನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ರಾಯಚೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಇಂದು ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನೂತನ ಪುಸ್ತಕಗಳು ಮತ್ತು ಸರಸ್ವತಿ ಪೂಜೆ ಮಾಡಿದರು ತದನಂತರ ನೂತನವಾಗಿ ನಿರ್ಮಿಸಲಾಗಿರುವ ಗ್ರಂಥಾಲಯ ಕಟ್ಟಡಕ್ಕೆ ಡಿಜಿಟಲ್ ಗ್ರಂಥಾಲಯ ಚಾಲನೆ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ದುರ್ಗೇಷ, ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಎಂ ಎಸ್ ರೆಬಿನಾಳ, ನಗರಸಭೆ ಸದಸ್ಯ ಎಂ ಜಯ್ಯಣ್ಣ ಸೇರಿದಂತೆ ಅನುಜನ ಅಧಿಕಾರಿಗಳು ಮತ್ತು ಮುಖಂಡರು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮವು ಬೆಳಗ್ಗೆ 10.30ಕ್ಕೆ ನೆರವೇರಬೇಕಾಗಿತ್ತು, ಆದರೆ ಜನಪ್ರತಿನಿಧಿಗಳು ಯಾರು ಬಾರದ ಹಿನ್ನೆಲೆಯಲ್ಲಿ 12ಗಂಟೆಗೆ ನೆರವೇರಿಸಲಾಯಿತು. ಕೊನೆಗೆ ಸ್ಥಳಿಯ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಬರಬೇಕಿತ್ತು, ಆದರೆ ಅವರ ದಾರಿ ಕಾದು ಸುಸ್ತಾದ ಅಧಿಕಾರಿಗಳು ಬೇಸತ್ತು ಕೊನೆಗೆ ಅಧಿಕಾರಿಗಳೆ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಮಾಡಿದರು.