ಸಿಡಿಲು ಬಡಿದು ಎಮ್ಮೆ ಸಾವು..!
ಚಡಚಣ : ಸಿಡಿಲು ಬಡಿದು ಎಮ್ಮೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲ್ಲೂಕಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಗಾಳಿ,ಗುಡುಗು, ಮಿಂಚು ಸಮೇತ ಜೋರಾದ ಮಳೆಯಲ್ಲಿ ಸಿಡಿಲು ಬಿದ್ದ ಕಾರಣ ಎಮ್ಮೆ ಸಾವನ್ನಪ್ಪಿರುವ ದುರ್ಘಟನೆ ತಾಲೂಕು ಮಣಂಕಲಗಿ ಗ್ರಾಮದಲ್ಲಿ ನಡೆದಿದೆ. ಮಣಂಕಲಗಿ ಗ್ರಾಮದ ಪಂಡೀತ ಧರೆಪ್ಪ ಪಡನೂರ ಅವರ ಎಮ್ಮೆ ಸಿಡಿಲಿಗೆ ಬಲಿಯಾಗಿದ್ದು, ಚಡಚಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.