ಇಂಡಿ : ಕರ್ನಾಟಕ ಸರ್ಕಾರ ತಾಲೂಕು ಆಡಳಿತ , ತಾಲೂಕು ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಆಚರಿಸಲಾಯಿತು,
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಎಸ್ ಎಸ್ ಚೂರಿ ನ್ಯಾಯವಾದಿಗಳು ಮಾತನಾಡುತ್ತ,
ಕೇವಲ ಭಾರತ ದೇಶದಲ್ಲಿ ಮಾತ್ರ ಅಂಬೇಡ್ಕರ್ ಜಯಂತಿಯನ್ನು ಆಚರಿಸಲ್ಲ, ಬದಲಾಗಿ ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಗುತ್ತೆ ಎಂದರೆ ಅದು ಹೆಮ್ಮೆಯ ವಿಷಯ.
ಸಂವಿಧಾನದ ಮೂಲಕ ಸರ್ವ ಜನರ ಸರ್ವ ಸಮಾಜದ ಹಿತವನ್ನು ಕಾಪಾಡುವಲ್ಲಿ ಬಹು ಮುಖ್ಯವಾಗಿ
ಬಾಬ ಸಾಹೇಬ ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಕೋಡುಗೆಯಾಗಿದೆ ಎಂದರು. ಎಲ್ಲಾ ಜಾತಿ ಧರ್ಮವನ್ನು ಎತ್ತಿ ಹಿಡಿಯುವ ಮೂಲಕ ಈ ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನವನ್ನು ನೀಡುವಲ್ಲಿ ಇವರ ಪಾತ್ರ ಬಹಳ ಪ್ರಮುಖವಾಗಿದೆ. ಇದರಿಂದ ದೇಶದ ಸರ್ವ ಜನರ ಸುಖಿ ಜೀವನಕ್ಕೆ ಅಂಬೇಡ್ಕರ್ ಅವರ ಕೋಡುಗೆ ಅಪಾರ ವಾದುದ್ದು, ಮಹಿಳೆಯರಿಗೆ ಓಟಿನ ಹಕ್ಕು, ಸಮಾನ ಹಕ್ಕು ಆಸ್ತಿಯ ಹಕ್ಕು, ಕಾರ್ಮಿಕರ ಹಕ್ಕು, ಹೀಗೆ ದೇಶದ ಎಲ್ಲಾ ಜನಾಂಗದವರ ಬಗ್ಗೆ ಅಪಾರವಾದ ಕಾಳಜಿಯಿಂದ ದೇಶ ಸುರಕ್ಷವಾಗಿ ಸಾಗಿದೆ ಅಂದರೆ ಅದಕ್ಕೆ ಕಾರಣ ಅಂಬೇಡ್ಕರ್ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಯಶವಂತರಾಯಗೌಡ ವಿ ಪಾಟೀಲ ವಹಿಸಿಕೊಂಡು ಮಾತಾನಾಡಿದರು. ಜೊತೆಗೆ ಪುರಸಭೆ ಅಧ್ಯಕ್ಷ ಬನ್ನೆಮ್ಮ ಹದರಿ, ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡಾದೆ, ತಹಶಿಲ್ದಾರ ಸಿ.ಎಸ್ ಕುಲಕರ್ಣಿ, ಡಿವಾಯ್ಎಸ್ಪಿ ಚಂದ್ರಕಾಂತ ನಂದರೆಡ್ಡಿ, ತಾಲೂಕು ಪಂಚಾಯತ್ ಅಧಿಕಾರಿ ಸುನೀಲ್ ಮದ್ದಿನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಜೆ ಇಂಡಿ ಅನೇಕರು ಉಪಸ್ಥಿತರು.