ಈ ವೇಳೆ ಚಿತ್ರ ನಿರ್ದೇಶಕ ಅನುರಾಗ ಕಶ್ಯಪ ಬ್ರಾಹ್ಮಣ ವಿರೋಧಿ ನಿಂದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಈ ವೇಳೆ ಅರವಿಂದ ಕುಲಕರ್ಣಿ, ವಿಜಯಕುಮಾರ್ ಬಡಿಗೇರ, ಸುರೇಶ ಕುಲಕರ್ಣಿ ಈರಣ್ಣ ಬಡಿಗೇರ ಮಾತನಾಡಿ ಸಿಇಟಿ ಪರೀಕ್ಷೆಯಲ್ಲಿ ಈ ಹಿಂದೆ ಹಿಂದೂ ಮಹಿಳೆಯರ ಕಾಲುಂಗರ ಮಾಂಗಲ್ಯ ತಗೆಸಿದ್ದರು ಈಗ ಜನಿವಾರ ತಗೆಸಿದ್ದಾರೆ ರಾಜ್ಯ ಕಾಂಗ್ರೆಸ್ ಸರಕಾರ ಸತತವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ ಇಂತಹ ಘಟನೆ ಅನ್ಯ ಧರ್ಮಿಯರ ವಿರುದ್ಧ ಮಾಡುವ ಧೈರ್ಯ ಸರಕಾರಕ್ಕೆ ಇಲ್ಲಾ ಹಿಂದೂಗಳು ಏನೆ ಮಾಡಿದರು ಸಹಿಸಿಕೊಳ್ಳುತ್ತಾರೆಂಬ ಭಾವನೆ ಈ ಸರಕಾರಕ್ಕಿದೆ ಎಂದು ಕಿಡಿಕಾರಿದರು
ಮನವಿ ಪತ್ರವನ್ನು ಎಬಿವಿಪಿ ಹಿರಿಯ ಕಾರ್ಯಕರ್ತ ಉದಯಸಿಂಗ್ ರಾಯಚೂರು ಓದಿ ದರು ಮನವಿಯನ್ನು ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಗೃಹ ಸಚಿವರಿಗೆ ಸಲ್ಲಿಸಿದರು
ಹೋರಾಟದಲ್ಲಿ ಜನಿವಾರ ಧರಿಸುವ ಸಮಾಜಗಳ ಮುಖಂಡರಾದ ಮಾಣಿಕಚಂದ ದಂಡಾವತಿ, ವಿ ಆರ್ ದೇಶಪಾಂಡೆ, ಆನಂದ ಜಂಬಗಿ, ಎಸ್ ಆರ್ ಕುಲಕರ್ಣಿ, ಸತೀಶ ಕುಲಕರ್ಣಿ, ಅನಿಲ್ ಕುಮಾರ್ ಕುಲಕರ್ಣಿ, ಸುಭಾಷ್ ಕುಲಕರ್ಣಿ, ಮಹೇಶ ತೇಲಂಗಿ , ಭರತೇಶ ಮಂಕಣಿ, ನಾರಾಯಣ ಮಿರಜಕರ, ಕುಬೇರ ಮಿರಜಕರ,ಮಂಜುನಾಥ ಪೇಟಕರ, ಎಸ್ ಎಂ ಮಿರಜಕರ, ಆರ್ ವಿ ಪೂರೋಹಿತ್, ಭರತ ಭೋಸಲೇ ,ರಾಜೇಂದ್ರ ಭೋಸಲೆ, ರಮೇಶ ದೂಡಮನಿ ಚಂದ್ರಶೇಖರ ಕಲಾಲ, ನಾರಾಯಣ ದುರ್ವೆ, ವಿಕ್ರಮ ಓಸ್ವಾಲ್, ಭರತೇಶ ಶೆಟ್ಟಿ, ಬಿ ಹೆಚ್ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಯಶವಂತ ಕಲಾಲ,ಚಿದಂಬರ ಜೋಶಿ, ರಾಘವೇಂದ್ರ ಆಲೂರ,ಸಂಜು ಚವ್ಹಾಣ ಸೇರಿದಂತೆ ವಿಪ್ರ , ವಿಶ್ವಕರ್ಮ, ಮರಾಠಾ, ಕ್ಷೇತ್ರೀಯ ಜೈನ ಸಮಾಜ, ಸವಿತಾ( ನಯನಜ ಕ್ಷತ್ರಿಯ) ಸೋಮವಂಶ ಆರ್ಯ ಕ್ಷತ್ರಿಯ, ಸೂರ್ಯವಂಶಿ ಕ್ಷತ್ರಿಯ ಸೇರಿದಂತೆ 18 ಜನಿವಾರ ಧರಿಸುವ ಸಮಾಜದ ಪ್ರಮುಖರು ಭಾಗವಹಿಸಿದ್ದರು ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆರಂಭವಾದ ಬೈಕ್ ಜಾಥಾ ಶಾರದಾ ದೇವಿ ಮಂದಿರ , ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಮಾರ್ಗವಾಗಿ ಗ್ರಾಮದೇವತೆ ಕಟ್ಟೆಯಿಂದ ಬಸವೇಶ್ವರ ವೃತ್ತ , ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಮಾರ್ಗವಾಗಿ ತಹಶಿಲ್ದಾರ ಕಚೇರಿಯ ವರಗೆ ಮಾಡಲಾಯಿತು.